ನ್ಯೂಸ್

ಪುನೀತ್ ನೆನಪಿಗಾಗಿ ತಮ್ಮ ಮಗುವಿಗೆ 'ಅಪ್ಪು' ಎಂದು ಹೆಸರಿಟ್ಟ ದಂಪತಿ: ಅಂತ್ಯಸಂಸ್ಕಾರದ ದಿನವೇ ನಾಮಕರಣ

arunakunigal

ಕೊಪ್ಪಳ: ನಟ ಪುನೀತ್​ ರಾಜ್​ಕುಮಾರ್​ ಭೂತಾಯಿಯ ಮಡಿಲು ಸೇರಿ ಎರಡು ವಾರ ಕಳೆದರೂ ಅಭಿಮಾನಿಗಳ ಮನದಲ್ಲಿ ಅಪ್ಪು ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ. ಅಪ್ಪು ಫೋಟೋವನ್ನು ಮನೆಯಲ್ಲಿಟ್ಟು ಬಹುತೇಕರು ಪೂಜಿಸುತ್ತಿದ್ದಾರೆ. ಆದರೆ ಇಲ್ಲೊಂದು ದಂಪತಿ ಅಪ್ಪು ನೆನಪಿಗಾಗಿ ತನ್ನ ಮಗುವಿಗೆ 'ಅಪ್ಪು' ಎಂದೇ ನಾಮಕರಣ ಮಾಡಿದೆ.

'ಅಪ್ಪು' ಅಂತ್ಯಕ್ರಿಯೆ ದಿನವೇ ಕೊಪ್ಪಳ ತಾಲೂಕು ಇರಕಲ್‌ಗಡದ ಮಂಜುನಾಥ್ ಗುತ್ತೂರ್ ಮತ್ತು ಮೀನಾಕ್ಷಿ ದಂಪತಿ ತಮ್ಮ ಮಗುವಿಗೆ ಅಪ್ಪು ಎಂದು ನಾಮಕರಣ ಮಾಡಿದ್ದಾರೆ. ಆಗ ಈ ಮಗು ಹುಟ್ಟಿ 24 ದಿನ ಆಗಿತ್ತಷ್ಟೆ.