ನ್ಯೂಸ್

ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್​: ಅಪ್ಪನ ನಡೆ ಅನುಸರಿಸಿದ ಮಗ

arunakunigal

ಬೆಂಗಳೂರು: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಮನದಲ್ಲಿ 'ರಾಜಕುಮಾರ'ನಂತೆ ಮೆರೆದ ಪುನೀತ್​, ಇಂದಿಗೂ ಅವರ ಪಾಲಿಗೆ 'ರಾಜಕುಮಾರ'.

ನಗುಮುಖ, ಸರಳ ವ್ಯಕ್ತಿತ್ವದಿಂದಲೇ ಎಲ್ಲರಿಗೂ ಇಷ್ಟವಾಗುತ್ತಿದ್ದ ಅಪ್ಪು, ಇಂದು ಹೃದಯಾಘಾತದಿಂದ ವಿಧಿವಶವಾಗಿದ್ದಾರೆ. ಬದುಕಿದ್ದಾಗಲೂ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಚಿಲುಮೆಯಂತಿದ್ದ ಅಪ್ಪು, ಸಾವಿನ ಬಳಿಕವೂ ಸಾರ್ಥಕತೆ ಮೆರೆದಿದ್ದಾರೆ. ನೇತ್ರದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾರೆ.

ತಂದೆ ಡಾ.ರಾಜ್​ಕುಮಾರ್​ ಅವರ ನಡೆಯನ್ನೇ ಅನುಸರಿದ ಪುನೀತ್​ ನೇತ್ರದಾನ ಮಾಡುವ ಮೂಲಕ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.