ವಿಜಯಪುರ: ರಾಜ್ಯದಲ್ಲಿ ದಿನೇದಿನೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿದ್ದ ಕೂಡ್ಲಿಗಿ ಪಟ್ಟಣದ ನಿವಾಸಿ, ಕಟ್ಟಡ ಕಾರ್ಮಿಕ ಸಂತೋಷ್, ಪ್ರೀತಿ ಮಾಡುತ್ತಿರುವೆ. ನಿನ್ನನ್ನು ಮದುವೆ ಆಗುವೆ ಎಂದು ನಂಬಿಸಿದ್ದ. ಆಟವಾಡಿಕೊಂಡಿರಬೇಕಿದ್ದ ವಯಸ್ಸಿನ ಬಾಲಕಿಗೆ ಪ್ರೀತಿ-ಪ್ರೇಮ ಎಂದು ತಲೆಕೆಡಿಸಿದ್ದು ಮಾತ್ರವಲ್ಲ, ಆಕೆಯ ಜತೆ ಬಲವಂತವಾಗಿ ಲೈಂಗಿಕ ಸಂಪರ್ಕವನ್ನೂ ಬೆಳೆಸಿ ಪರಾರಿಯಾಗಿದ್ದಾನೆ.
ಕೂಡ್ಲಿಗಿ ತಾಲೂಕಿನ ಕಾನಹೊಸಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಗೊತ್ತಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.