ನ್ಯೂಸ್

ಡ್ರಾಪ್​ ಕೊಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಬೆಂಗಳೂರಲ್ಲಿ ಪೊಲೀಸ್​ ಪೇದೆ ಬಂಧನ

arunakunigal

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಅಪ್ತಾಪ್ತೆಯನ್ನ‌ ಮನೆಗೆ‌‌ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪದಡಿ ಗೋವಿಂದರಾಜನಗರ ಪೊಲೀಸ್ ಠಾಣೆಯ ಪೇದೆಯೊಬ್ಬರನ್ನ ಬಂಧಿಸಲಾಗಿದೆ.

ಪವನ್ ದ್ಯಾವಣ್ಣನವರ್ ಬಂಧಿತ. ಜು.27ರಂದು ಅಪ್ರಾಪ್ತ ಬಾಲಕಿಯೊಬ್ಬಳು ಚಾಮರಾಜನಗರ ಮೂಲದ ಯುವಕನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಇದೇ ಕಾರಣಕ್ಕೆ ಮನೆ‌ ತೊರೆದಿದ್ದ ಬಾಲಕಿ, ಜು.27ರಂದು ಪವನ್ ಪಾರ್ಕ್ ಬಳಿ ಒಬ್ಬಳೇ ಓಡಾಡುತ್ತಿದ್ದಳು.‌ ಅನುಮಾನಗೊಂಡು ಈಕೆಯನ್ನು ಪೇದೆ ಪ್ರಶ್ನಿಸಿದಾಗ, ಚಾಮರಾಜನಗರಕ್ಕೆ ಹೋಗಬೇಕೆಂದು ಹೇಳಿದ್ದಳು.

ಡ್ರಾಪ್‌ ಕೊಡುವುದಾಗಿ ನಂಬಿಸಿ ಆಕೆಯನ್ನು ತನ್ನ ಮನೆಗೆ‌ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪ ಪೇದೆ ಮೇಲಿದೆ. ಪೇದೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.