ಯೂಕ್ರೇನ್‌ ಅಧ್ಯಕ್ಷ ಹಾಗೂ ಪ್ರಧಾನಿ ಮೋದಿ 
ನ್ಯೂಸ್

ಯೂಕ್ರೇನ್​ ಅಧ್ಯಕ್ಷರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಆ 35 ನಿಮಿಷದ ಮಾತುಕತೆ ಏನು?

ನವದೆಹಲಿ: ಯುದ್ಧ ಪೀಡಿತ ಉಕ್ರೇನ್​ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರಿಗೆ ಸೋಮವಾರ ಬೆಳಗ್ಗೆ ದೂರವಾಣಿ ಮೂಲಕ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸುಮಾರು 35 ನಿಮಿಷ ಮಾತುಕತೆ ನಡೆಸಿದರು.

ರಷ್ಯಾ ಸೇನಾ ಪಡೆಯ ದಾಳಿಯ ಪರಿಣಾಮ ಯೂಕ್ರೇನ್​ನಲ್ಲಿರುವ ​ಭಾರತೀಯರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಹುಪಾಲು ವಿದ್ಯಾರ್ಥಿಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ. ಇದಕ್ಕೆ ಸಹಕರಿಸಿದ್ದಕ್ಕೆ ಧನ್ಯವಾದಗಳು. ಯುದ್ಧ ವಲಯದಲ್ಲಿ ಇನ್ನೂ ನೂರಾರು ಭಾರತೀಯರು ಇದ್ದಾರೆ. ಅವರಲ್ಲೆರನ್ನೂ ತಾಯ್ನಾಡಿಗೆ ಸ್ಥಳಾಂತರಿಸಲು ಸಹಕರಿಸಬೇಕು. ಸುಮಿಯಲ್ಲಿರುವ ಸುಮಾರು 500ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಸ್ಥಳಾಂತರಿಸುವ ಪ್ರಯತ್ನಕ್ಕೆ ನಿಮ್ಮ ಸರ್ಕಾರ ನಿರಂತರ ಬೆಂಬಲ ಕೊಡಬೇಕು ಎಂದು ಯೂಕ್ರೇನ್​ ಅಧ್ಯಕ್ಷರನ್ನು ನರೇಂದ್ರ ಮೋದಿ ಕೋರಿದರು ಎಂದು ಮೂಲಗಳು ತಿಳಿಸಿವೆ.

ರಷ್ಯಾ-ಯೂಕ್ರೇನ್​ ನಡುವೆ ಯುದ್ಧ ಶುರುವಾರ ಬಳಿಕ ಉಕ್ರೇನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತನಾಡಿದ್ದು ಇದು ಎರಡನೇ ಬಾರಿ. ಫೆಬ್ರವರಿ 26ರಂದು ಕೂಡ ಝೆಲೆನ್ಸ್ಕಿ ಜತೆ ಪ್ರಧಾನಿ ಮೋದಿ ಮಾತನಾಡಿದ್ದರು.