ನ್ಯೂಸ್

ರೇವಣ್ಣ ಮೇಲಷ್ಟೇ ಪ್ರೀತಿ ಇದ್ರೆ ಸಾಲದು, ನನ್ಗೂ ಒಂಚೂರು ಪ್ರೀತಿ-ಆಶೀರ್ವಾದ ಕರುಣಿಸಿ: ಸುತ್ತೂರು ಶ್ರೀಗಳಿಗೆ ಪ್ರಜ್ವಲ್ ಮನವಿ

ಹಾಸನ: ಸುತ್ತೂರು ಮಠದ ಸ್ವಾಮೀಜಿ ಅವರಿಗೆ ಬರೀ ರೇವಣ್ಣ ಅವರ ಮೇಲೆ ಪ್ರೀತಿ ಇದ್ದರೆ ಸಾಲದು. ಅವರ ಮಗನ ಮೇಲೂ ಒಂದಷ್ಟು ಪ್ರೀತಿ, ಆಶೀರ್ವಾದ ಇದ್ದರೆ ಮುಂದಿನ ದಿನಗಳಲ್ಲಿ ನಾನೂ ಕೂಡ ಬೆಳೆಯಲು ಒಳ್ಳೆಯದಾಗುತ್ತೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.

ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀನಂಜುಂಡೇಶ್ವರ ದೇವಾಲಯ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಜ್ವಲ್​ ಭಾಷಣ ಮಾಡುತ್ತಾ, ಇವತ್ತು ನನ್ನದು ಅದೆಂಥಾ ಪುಣ್ಯ ನೋಡಿ. ಶಿವನ ದೇವಸ್ಥಾನಕ್ಕೆ ಹೋಗಬೇಕು ಅಂದುಕೊಂಡಿದ್ದೆ. ಆದರೆ ಇವತ್ತು ದೇವರೇ ನನ್ನನ್ನು ಇಲ್ಲಿ ಕರೆಸಿಕೊಂಡು ಆಶೀರ್ವಾದಿಸಿದೆ. ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ನನ್ನನ್ನು ಬರಮಾಡಿಕೊಂಡಿದ್ದೀರಿ. ಎಲ್ಲ ಗುರುಗಳ ಆಶೀರ್ವಾದ ಪಡೆಯಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದರು. ಮಾತು ಎತ್ತಿದರೆ ರೇವಣ್ಣ ಅವರನ್ನೇ ಕರೆಸಿಕೊಳ್ಳುತ್ತಾರೆ. ಗುರುಗಳು ನಮ್ಮನ್ನು ಯಾವತ್ತೂ ಕರೆಸಿಕೊಂಡಿಲ್ಲ, ಇನ್ಮುಂದೆ ನಮ್ಮನ್ನೂ ಕರೆಸಿಕೊಂಡರೆ, ಭಕ್ತಾದಿಗಳಾಗಿ ಮಠಕ್ಕೆ ಬಂದು ಸಣ್ಣಪುಟ್ಟ ಸೇವೆ ಮಾಡುವೆ. ಸುತ್ತೂರು ಮಠದ ಶ್ರೀಗಳು ನನ್ನ ತಂದೆ ರೇವಣ್ಣ ಅವರ ಮೇಲಷ್ಟೇ ಪ್ರೀತಿ ತೋರಬಾರದರು. ಮಗನಾದ ನನ್ನ ಮೇಲೂ ಪ್ರೀತಿ ತೋರಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.