ಆನೇಕಲ್: ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊವಿಡ್-19 ಸೋಂಕಿತ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.
ಮೇ 17ರಂದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಪತ್ರೆಗೆ ದಾಖಲಾಗಿದ್ದು, ಮೇ 18ರಂದು ಕರೊನಾ ದೃಢಪಟ್ಟಿತ್ತು. ಅಂದಿನಿಂದಲೂ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ: ಮಹಿಳೆಗೆ ಕರೊನಾ ಸೋಂಕು
ಈ ವ್ಯಕ್ತಿ ಫಿಜಿಯೋಥೆರಪಿಸ್ಟ್ ಆಗಿದ್ದರು. ಮೂಲತಃ ತಮಿಳುನಾಡಿನ ವೇಲೂರಿನ ಬಾಗಾಯಾಮ್ ಗ್ರಾಮದ ಸಂಜೀವಿನಪುರದವರಾಗಿದ್ದು, ಹಲವು ವರ್ಷಗಳಿಂದಲೂ ಬೆಂಗಳೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ಪತ್ನಿ, ಮಗು ಜತೆ ವಾಸವಾಗಿದ್ದರು. ಲಾಕ್ಡೌನ್ಗೂ ಮೊದಲು ಅಂದರೆ ಮಾರ್ಚ್ನಲ್ಲಿ ಇವರೆಲ್ಲ ಊರಿಗೆ ಹೋಗಿದ್ದರು. ಮೇ 8ರಂದು ಕೇರಳ ರಿಜಿಸ್ಟರ್ ಕಾರಿನಲ್ಲಿ ವೇಲೂರಿನಿಂದ ಅತ್ತಿಬೆಲೆ ಮೂಲಕ ಅನಂತನಗರಕ್ಕೆ ಬಂದಿದ್ದ. ಅನಂತನಗರದಿಂದ ಚಂದಾಪುರ ಬಡಾವಣೆ ಸೇರಿ, ಹಲವು ಕಡೆ ಸಂಚರಿಸಿದ್ದ.
ಈ ವ್ಯಕ್ತಿಯಲ್ಲಿ ಸೋಂಕು ದೃಢಪಡುತ್ತಿದ್ದಂತೆ ಅವರು ವಾಸವಾಗಿದ್ದ ಅಪಾರ್ಟ್ಮೆಂಟ್ ಸೀಲ್ಡೌನ್ ಆಗಿತ್ತು. ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ, ಸೆಕ್ಯೂರಿಟಿ, ಮನೆ ಕೆಲಸದಾಕೆ ಬಂದಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ 200 ಮಂದಿ ವಾಸಾಗಿದ್ದಾರೆ. ಸದ್ಯ ಅಲ್ಲಿ 100 ಮೀಟರ್ ಪ್ರದೇಶ ಸಂಪೂರ್ಣ ಸೀಲ್ಡೌನ್ ಆಗಿದೆ. (ದಿಗ್ವಿಜಯ ನ್ಯೂಸ್)