ನ್ಯೂಸ್

ಮಾರಕಾಸ್ತ್ರ ಹಿಡಿದು ಸುಲಿಗೆ; ರೆಡ್ ಹ್ಯಾಂಡ್‌ ಆಗಿ ಹಿಡಿದ ಟ್ರಾಫಿಕ್ ಸಿಬ್ಬಂದಿ

ಬೆಂಗಳೂರು: ಉಪ್ಪಾರಪೇಟೆ ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ದರೋಡೆ ಪ್ರಯತ್ನ ತಪ್ಪಿದೆ. ಪೊಲೀಸರ ದಿಟ್ಟತನದ ಕಾರ್ಯಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವ್ಯಕ್ತಿಯೊಬ್ಬ ಮತ್ತೊಬ್ಬನ ಜತೆ ಸೇರಿ ಎರಡು ಉದ್ದನೆಯ ಲಾಂಗ್ ಹಿಡಿದು ದ್ವಿಚಕ್ರ ವಾಹನ ಸವಾರರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸುವುದರ ಜತೆಗೆ ಹೆದರಿಸಿ 10000 ರೂ.ಗಳನ್ನು ದೋಚಿದ್ದಾನೆ. ಆ ಸಂದರ್ಭದಲ್ಲಿ ಪ್ಯಾಲೆಸ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಯ ಎಎಸ್ಐ. ರವೀಂದ್ರ ಅವರು ಹಾಗೂ ಎಚ್ ಸಿ. ಲಕ್ಷ್ಮಣಯ್ಯ ಮತ್ತು ಮರಿಸ್ವಾಮಿ ಬಂದಿದ್ದಾರೆ. ಆರೋಪಿಯನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ಉಪ್ಪಾರಪೇಟೆ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳಿಂದ ಲಾಂಗು ಮತ್ತು ಮಚ್ಚನ್ನು ವಶಪಡಿಸಿಪಡಿಸಿಕೊಳ್ಳಲಾಗಿದೆ. ಉಪ್ಪಾರಪೇಟೆ ಸಂಚಾರ ಪೊಲೀಸರ ಸಮಯ ಪ್ರಜ್ಞೆಯ ಕಾರ್ಯಾಚರಣೆಗೆ ಇದಾಗಿದೆ.