ಆನೇಕಲ್: ಇಲ್ಲಿನ ವೀವರ್ಸ್ ಕಾಲನಿಯ ನಿವಾಸಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೂ ಪಾಳುಬಿದ್ದ ಮನೆಗೆ ಹೋಗಿ ಅಲ್ಲಿ ಸಾವನ್ನಪ್ಪಿದ್ದಾರೆ.
ರವಿಚಂದ್ರ ಮೃತ ವ್ಯಕ್ತಿ. ಈತ ಮನೆಯಲ್ಲಿಯೇ ಮಗ್ಗಗಳನ್ನು ಹಾಕಿಕೊಂಡು ನೇಯ್ಗೆ ವೃತ್ತಿ ಮಾಡುತ್ತಿದ್ದ. ಆದರೆ ಪತ್ನಿ ಜಗಳವಾಡಿಕೊಂಡು ಇವನನ್ನು ಬಿಟ್ಟುಹೋಗಿದ್ದರಿಂದ ತುಂಬ ದುಃಖದಲ್ಲಿದ್ದರು. ಇದನ್ನೂ ಓದಿ: ಶುಕ್ರವಾರ ನಿರ್ಧಾರವಾಗುತ್ತಾ ಅಂತಿಮ ಪರೀಕ್ಷೆ ಹಣೆಬರಹ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಐದು ವರ್ಷಗಳ ಹಿಂದೆಯೇ ಇವರ ಹೆಂಡತಿ ಜಗಳವಾಡಿಕೊಂಡು ತವರುಮನೆ ಸೇರಿದ್ದಾರೆ. ಇದರಿಂದಾಗಿ ಮನನೊಂದಿದ್ದ ರವಿಚಂದ್ರ ಸಿಕ್ಕಾಪಟೆ ಮದ್ಯಸೇವನೆ ಮಾಡುತ್ತಿದ್ದರು. ಕ್ರಮೇಣ ಖಿನ್ನತೆಗೆ ಜಾರಿದ್ದರು. ನಿನ್ನೆ ಮನೆಯಿಂದ ಹೊರಹೋದ ಇವರು ಮದ್ಯಪಾನ ಮಾಡಿ, ನಂತರ ಪಟ್ಟಣದ ಬಹದ್ದೂರ್ಪುರ ರಚ್ಚೆಯ ಪಾಳುಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆನೇಕಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)