Rare Snake : ಇಂದಿಗೂ ಕರ್ನಾಟಕ ಮತ್ತು ಕೇರಳದಲ್ಲಿ ಕಾಣಸಿಗದ ಮುತ್ತಿನ ಬಿಳಿ ಬಣ್ಣ ಹಾಗೂ ಕೆಂಪು ಕಣ್ಣಿನ ಅಪರೂಪದ ಹಾವು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಕೇರಳದ ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರು ತಮ್ಮ ಸ್ನೇಹಿತರ ಜತೆಗೂಡಿ ಅಪರೂಪದ ಹಾವನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ರಕ್ಷಣೆ ಮಾಡಿದ್ದಾರೆ.
ವಾವಾ ಸುರೇಶ್ ಅವರ ಸ್ನೇಹಿತ ನವೀನ್ ರಾಖಿ ಮತ್ತು ಅಭಿಜಿತ್ ಎಂಬುವರು ಅಮರಾವತಿಯಲ್ಲಿ ಹಾವು ರಕ್ಷಣೆ ಮಾಡುವ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಮೇಕೆಯ ಬೋನಿನಲ್ಲಿ ಬಿಳಿ ಬಣ್ಣದ ಹಾವು ಕಂಡಿರುವುದಾಗಿ ಅಭಿಜಿತ್ ಅವರಿಗೆ ಕರೆ ಒಂದು ಬಂದಿತ್ತು. ಅಭಿಜಿತ್ ಕೂಡಲೇ ನವೀನ್ಗೆ ಮಾಹಿತಿ ನೀಡಿದರು.
ಮಾಹಿತಿ ಸಿಗುತ್ತಿದ್ದಂತೆ ನವೀನ್ ಮತ್ತು ವಾವಾ ಸುರೇಶ್ ಸ್ಥಳಕ್ಕೆ ತಲುಪಿದರು. ಇದೇ ಸಂದರ್ಭದಲ್ಲಿ ಅಭಿಜಿತ್ ಅವರು ಬೇರೆ ಕಡೆಯಲ್ಲಿ ಸಿಕ್ಕ ‘ಕುಕ್ರಿ’ ಹಾವಿನೊಂದಿಗೆ ಸ್ಥಳಕ್ಕೆ ಬಂದರು. ಆ ಹಾವನ್ನು ವಾವಾ ಸುರೇಶ್ ಅವರು ನೋಡಿದಾಗ ಅದು ನಮ್ಮ ದೇಶದ ಚುರ್ತಾ ಎಂಬ ಹಾವು. ಇದನ್ನು ಕರ್ನಾಟಕದಲ್ಲಿ 'ಕಾಮನ್ ಕುಕ್ರಿ' ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಗಂಡಸರು ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದು! ಆಘಾತಕಾರಿ ಸಂಗತಿ ಬಿಚ್ಚಿಟ್ಟ ಆರೋಗ್ಯ ತಜ್ಞರು | Hot Water
ಬಳಿಕ ಮೂವರು ಸೇರಿ ಫೋನ್ ಕರೆ ಬಂದ ಹಳ್ಳಿಯ ಕಡೆ ಹೋಗುತ್ತಾರೆ. ಅವರನ್ನು ಕಂಡ ಗ್ರಾಮಸ್ಥರು ಕೂಡ ಸ್ಥಳದಲ್ಲಿ ಜಮಾಯಿಸುತ್ತಾರೆ. ಮನೆಯೊಂದರ ಕುರಿದೊಡ್ಡಿಯಲ್ಲಿ ಮೂವರು ಹುಡುಕಾಡುವಾಗ ಹಾವೊಂದು ಕಾಣಿಸಿಕೊಳ್ಳುತ್ತದೆ.
ಕೆಂಪು ಕಣ್ಣು, ಬಿಳಿ ಬಣ್ಣದ ಹಾವನ್ನು ಕಂಡು ವಾವಾ ಸುರೇಶ್ ಮುಖದಲ್ಲಿ ಸಂತಸ ಮೂಡುತ್ತದೆ. ಏಕೆಂದರೆ, ಕೇರಳ ಹಾಗೂ ಕರ್ನಾಟಕದಲ್ಲಿ ಇಂತಹ ಹಾವು ಇದುವರೆಗೂ ಕಾಣಿಸಿಕೊಂಡಿಯೇ ಇಲ್ಲ. ಹೀಗಾಗಿ ಅಪರೂಪದ ಹಾವು ನೋಡಿ ಮಂತ್ರಮುಗ್ಧರಾಗುತ್ತಾರೆ. ಮೊದಲ ಬಾರಿಗೆ ಆ ಹಾವನ್ನು ಹಿಡಿದು ಖುಷಿ ಪಡುತ್ತಾರೆ. ಅಷ್ಟಕ್ಕೂ ಆ ಹಾವು ಯಾವುದೆಂದೆರೆ, ಅದೊಂದು ಅಲ್ಬಿನೋ ಹಾವು. ಇದುವರೆಗೆ ಕರ್ನಾಟಕದಿಂದ ಈ ಜಾತಿಯ ಹಾವು ಪತ್ತೆಯಾಗಿಲ್ಲ ಎನ್ನುತ್ತಾರೆ ನವೀನ್ ರಾಖಿ ಮತ್ತು ವಾವಾ ಸುರೇಶ್. (ಏಜೆನ್ಸೀಸ್)