ಬೆಂಗಳೂರು: ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ರಾತ್ರೋರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೋ ಸಹಿತ ‘ಪೇ ಸಿಎಂ’ ಪೋಸ್ಟರ್ ಅಂಟಿಸಿ ರಾಜ್ಯ ಸರ್ಕಾರವನ್ನ ಅಣಕಿಸಿದ್ದ ಪ್ರಕರಣ ಸಂಬಂಧ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ.
ಆರ್.ಟಿ.ನಗರ, ಸದಾಶಿವನಗರ, ಶೇಷಾದ್ರಿಪುರ ಭಾರತಿನಗರ, ಹೈಗ್ರೌಂಡ್ಸ್ ಮತ್ತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ದೂರು ನೀಡಿದೆ. ದೂರಿನ ಅನ್ವಯ ಪೊಲೀಸರು ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ.