More

    ‘PAYCM’ ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ಕೌಂಟರ್: ಸಿದ್ದು-ಡಿಕೆಶಿ ಫೋಟೋ ಹಾಕಿ ಅಣಕಿಸಿದ ಕಮಲಪಡೆ

    ಬೆಂಗಳೂರು: ‘PAYCM’ ಕಾಂಗ್ರೆಸ್ ಅಭಿಯಾನಕ್ಕೆ ಗರಂ ಆಗಿರುವ ಬಿಜೆಪಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಫೋಟೋ ಹಾಕಿ ಅಣಕಿಸಿದೆ.

    ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ಮಂಗಳವಾರ ರಾತ್ರೋರಾತ್ರಿ ಸಿಎಂ ಬೊಮ್ಮಾಯಿ‌ ಫೋಟೋ ಸಹಿತ ‘ಪೇ ಸಿಎಂ’ ಪೋಸ್ಟರ್​ಗಳನ್ನು ಬೆಂಗಳೂರಿನಾದ್ಯಂತ ಅಂಟಿಸಿ ಕಾಂಗ್ರೆಸ್​ ಅಭಿಯಾನ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ QR ಕೋಡ್ ಸ್ಕ್ಯಾನ್ ಬಿಡುಗಡೆ ಮಾಡಿದೆ.

    'PAYCM' ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ಕೌಂಟರ್: ಸಿದ್ದು-ಡಿಕೆಶಿ ಫೋಟೋ ಹಾಕಿ ಅಣಕಿಸಿದ ಕಮಲಪಡೆ

    ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಫೋಟೋ ಹಾಕಿ ‘ರಾಜ್ಯವನ್ನ ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟ ಜೋಡಿಯನ್ನ ರಾಜ್ಯದಿಂದ ಕಿತ್ತೆಸೆಯಲು ಇದನ್ನ ಸ್ಕ್ಯಾನ್ ಮಾಡಿ. ರಾಜ್ಯವನ್ನ ಹಾಳು ಮಾಡುವುದು ಹೇಗೆ. ಸುಳ್ಳು ಸುದ್ದಿ, ಅಶಾಂತಿ ಹೇಗೆ ಹರಡಿಸಬೇಕು ಗಹನ ಚರ್ಚೆಯಲ್ಲಿರೋ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ’ ಎಂದು ಬರಹವುಳ್ಳ ಪೋಸ್ಟರ್​ ಅನ್ನು ಬಿಜೆಪಿ ಬಿಡುಗಡೆ ಮಾಡಿದೆ.

    'PAYCM' ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ಕೌಂಟರ್: ಸಿದ್ದು-ಡಿಕೆಶಿ ಫೋಟೋ ಹಾಕಿ ಅಣಕಿಸಿದ ಕಮಲಪಡೆ

    ‘ಸಾರ್ವಜನಿಕರ ಗಮನಕ್ಕೆ ನಿಮ್ಮ ಹತ್ತಿರ ಇವರನ್ನ ಸುಳಿದಾಡಲು ಬಿಡಬೇಡಿ’ ಎಂದು ಬರೆದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಫೋಟೋ ಹಾಕಿ ಅದರ ಕೆಳಗೆ ‘ರಿಡೂ ಸಿದ್ದರಾಮಯ್ಯ’ ಮತ್ತು ‘ಇಡಿ ಡಿ.ಕೆ. ಶಿವಕುಮಾರ್’ ಎಂದು ಹಾಕಿ ‘ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ’ ಅಂತ ಅಭಿಯಾನ ಆರಂಭಿಸಿದೆ.

    ಪೇಟಿಎಂ ಮಾದರಿಯಲ್ಲಿ ಬೆಂಗಳೂರಿನಲ್ಲಿ ರಾರಾಜಿಸುತ್ತಿದೆ PAYCM ಪೋಸ್ಟರ್! ಸರ್ಕಾರಕ್ಕೆ ಭಾರೀ ಮುಜುಗರ

    ಆನೇಕಲ್​ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?

    ನಾಳೆ ಬಯಲಾಗಲಿದೆ ಸಚಿವರೊಬ್ಬರ ಅಕ್ರಮ: ಏಕವಚನದಲ್ಲಿ ಮಾತಾಡಿ ಎಚ್​ಡಿಕೆಯನ್ನು ಕೆಣಕಿದ ಸಚಿವರಿಗೆ ಕಾದಿದ್ಯಾ ಗಂಡಾಂತರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts