ಇಸ್ಲಾಮಾಬಾದ್: ಇನ್ಮುಂದೆ ಪಾಕಿಸ್ತಾನದ ಸ್ಥಳೀಯ ಟಿವಿ ವಾಹಿನಿಗಳಲ್ಲಿ ಮುದ್ದಾಡುವ ದೃಶ್ಯ, ಅಸಭ್ಯ ಆಲಿಂಗನ, ಚುಂಬನ, ಧಿರಿಸು, ಮುದ್ದಾಡುವ ದೃಶ್ಯಗಳನ್ನು ಪ್ರಸಾರ ಮಾಡುವಂತಿಲ್ಲ.
ಆಲಿಂಗನ, ಚುಂಬನಗಳತಂಹ ದೃಶ್ಯ ಇಸ್ಲಾಮಿಕ್ ಸಂಸ್ಕೃತಿಯನ್ನ ಹಾಳು ಮಾಡುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಈ ಆದೇಶ ಹೊರಡಿಸಿದೆ.
ಅಪ್ಪುಗೆ, ಮುದ್ದಾಡುವ ದೃಶ್ಯಗಳು, ವಿವಾಹೇತರ ಸಂಬಂಧಗಳು, ಅಸಭ್ಯ, ಬೋಲ್ಡ್ ಡ್ರೆಸ್ಸಿಂಗ್... ಇತ್ಯಾದಿಗಳನ್ನು ಪ್ರದರ್ಶಿಸುವ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸೂಚಿಸಿದೆ. ಇಂತಹ ದೃಶ್ಯಗಳು ಜನರ ಮನಸ್ಸನ್ನು ಚಂಚಲಗೊಳಿಸಿ ಸಮಾಜದ ಸ್ವಾಸ್ಥ್ಯವನ್ನ ಹಾಡು ಮಾಡುತ್ತದೆ. ಹಾಗಾಗಿ ಇಂತಹ ದೃಶ್ಯಗಳಿಗೆ ಬ್ರೇಕ್ ಹಾಕಬೇಕು ಎಂದು ಪ್ರಾಧಿಕಾರ ಸೂಚಿಸಿದೆ. ಈ ನಿಯಮವನ್ನ ಹಲವರು ಸ್ವಾಗತಿಸಿದ್ದು, ಪಾಶ್ಚಿಮಾತ್ಯ ಪ್ರಭಾವ ತಡೆಯುವ ಉತ್ತಮ ಹೆಜ್ಜೆ ಎಂದು ಶ್ಲಾಘಿಸಿದ್ದಾರೆ.