ಭೋಪಾಲ್: ರಾಮ ಜನ್ಮ ಭೂಮಿ ಅಂದಾಕ್ಷಣ ಅಯೋಧ್ಯೆಯತ್ತ ಚಿತ್ತ ಹರಿಯಲಿದೆ. ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಗೆ ಹೋಗಬೇಕು ಎಂಬ ಇಂಗಿತ ಪ್ರತಿಯೊಬ್ಬ ಹಿಂದುಗಳ ಮನದಲ್ಲಿ ಹಡಗಿರುತ್ತೆ. ಇದಕ್ಕೆ ಅನುಕೂಲವಾಗಲೆಂದು ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಯೋಧ್ಯೆಗೆ ವಿಮಾನದಲ್ಲಿ ಉಚಿತ ಪ್ರಯಾಣ ಮಾಡಲು ಜನರಿಗೆ ಅವಕಾಶ ನೀಡಿದೆ. ಆದರೆ ಇದಕ್ಕೊಂದು ಕಂಡಿಷನ್ ಇದೆ.
ಅದ್ಹೇನು ಗೊತ್ತಾ? ‘ರಾಮಾಯಣ’ ಕುರಿತು ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಫರ್ಧೆಯಲ್ಲಿ ವಿಜೇತರಾಗಬೇಕು. ಗೆದ್ದವರಿಗೆ ಅಯೋಧ್ಯೆಗೆ ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಬಹುಮಾನವಾಗಿ ದೊರೆಯಲಿದೆ.
ರಾಮಾಯಣ ಕುರಿತು ರಸಪ್ರಶ್ನೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ ಎಂದು ಮಧ್ಯಪ್ರದೇಶದ ಸಂಸ್ಖೃತಿ ಮತ್ತು ಆಧ್ಯಾತ್ಮಿಕ ಇಲಾಖೆ ಸಚಿವೆ ಉಷಾ ಠಾಕೂರ್ ಹೇಳಿದ್ದಾರೆ. ಆದರೆ, ಸ್ಪರ್ಧೆ ಯಾವಾಗ ನಡೆಯುತ್ತೆ? ಎಷ್ಟು ಜನರು ಸ್ಫರ್ಧೆಯಲ್ಲಿ ಪಾಲ್ಗೊಳ್ಳಬಹುದು? ಎಷ್ಟು ಮಂದಿಗೆ ಬಹುಮಾನ ನೀಡಲಾಗುತ್ತೆ ಎಂಬುದರ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.