ನ್ಯೂಸ್

ಒಂದೇ ಸೀರೆಯಲ್ಲಿ ಸಾವಿನ ಮನೆಯ ಕದ ತಟ್ಟಿದ ತಾಯಿ-ಮಗಳು!

ಶಿವಮೊಗ್ಗ: ಒಂದೇ ಸಿರೆಯಲ್ಲಿ ತಾಯಿ-ಮಗಳಿಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಭದ್ರಾವತಿಯ ಯಾಕ್ಸಿನ್ ನಗರದಲ್ಲಿ‌ ಸಂಭವಿಸಿದೆ.

ಸಂಗೀತಾ(35) ಮತ್ತು ಇವರ ಪುತ್ರಿ ಮಧುಶ್ರೀ(11) ಮೃತ ದುರ್ದೈವಿಗಳು. ಸಂಗೀತಾಳ ಗಂಡ ಧನಶೇಖರ್ ವ್ಯಾಪರಿ. ಕರೊನಾ ಹಿನ್ನೆಲೆ ವ್ಯಾಪಾರದಲ್ಲಿ ನಷ್ಟ ಉಂಟಾಗಿ, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾನೆ.

ಗಂಡನ ಸಾಲದ ಬಗ್ಗೆ ತಿಳಿದಾಗಿನಿಂದ ಪತ್ನಿ ಸಂಗೀತಾ ಮಾನಸಿಕವಾಗಿ ಕುಗ್ಗಿದ್ದರು. ಸಾಲಕ್ಕೆ ಹೆದರಿದ ಸಂಗಿತಾ, ತನ್ನ ಮಗಳು ಮಧುಶ್ರೀಗೆ ಸೀರೆಯ ಒಂದು ಬದಿಯಿಂದ ನೇಣುಹಾಕಿ ಬಳಿಕ ಅದೇ ಸೀರೆಯ ಇನ್ನೊಂದು ಬದಿಯಿಂದ ತಾನೂ ಸಾವಿಗೆ ಕೊರಳೊಡ್ಡಿ ಪ್ರಾಣಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.