ನ್ಯೂಸ್

ಮಾರ್ಕಂಡೇಯ ಜಲಾಶಯದಲ್ಲಿ ಈಜಲು ಹೋಗಿ ಬಿಎಂಟಿಸಿ ಬಸ್​ ಚಾಲಕ ಸಾವು

ಕೋಲಾರ: ಮಾರ್ಕಂಡೇಯ ಜಲಾಶಯದಲ್ಲಿ ಈಜಲು ಹೋಗಿದ್ದ ಬಿಎಂಟಿಸಿ ಬಸ್​ ಚಾಲಕರೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬಂಗಾರಪೇಟೆ ತಾಲೂಕಿನ ಹಿರೇಕರಪನಹಳ್ಳಿ ನಿವಾಸಿ ಹರೀಶ್(28) ಮೃತ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರಾಗಿದ್ದ ಹರೀಶ್, ರಜೆ ಹಿನ್ನೆಲೆ ಊರಿಗೆ ಬಂದಿದ್ದರು.

ಒಂದು ತಿಂಗಳಿಂದ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಕೆರೆ-ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಮಾರ್ಕಂಡೇಯ ಜಲಾಶಯಕ್ಕೂ ಅಪಾರ ಪ್ರಮಾಣದ ನೀರು ಬಂದಿದೆ. ಇದನ್ನು ನೋಡಲೆಂದು ಮಾಲೂರು ತಾಲೂಕಿನ ಮಾರ್ಕಂಡೇಯ ಜಲಾಶಯದ ಬಳಿ ಬಂದಿದ್ದ ಹರೀಶ್​, ಈಜಲು ಹೋಗಿ ಅಲ್ಲೇ ಕೊನೆಯುಸಿರೆಳೆದಿದ್ದಾರೆ.