Woman: ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ಕೆಲಸದಾರರನ್ನುಇಟ್ಟುಕೊಂಡಿದ್ದೀರಾ? ಹಾಗಿದ್ದರೆ, ಇಂದೇ ಅವರ ಮೇಲೆ ಒಂದು ಕಣ್ಣಿಟ್ಟಿರಿ. ಇಲ್ಲವೇ ಸಿಸಿಟಿವಿ ಅಳವಡಿಸಿ ಆಗಾಗ ಗಮನಿಸುತ್ತಿರಿ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಘಟನೆ ಏಕಂತೀರಾ ಕೇಳಿದ್ರೆ ಶಾಕ್ ಆಗ್ತೀರ!
ಉತ್ತರ ಪ್ರದೇಶದ ಬಿಜ್ನೋರ್ನ ಉದ್ಯಮಿಯೊಬ್ಬರ ಮನೆಯೊಂದರಲ್ಲಿ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಮನೆ ಕೆಲಸದಾಕೆ, ಕೆಲಸ ಮಾಡುವಾಗ ಗಾಜಿನ ಲೋಟದಲ್ಲಿ ಮೂತ್ರ ವಿಸರ್ಜಿಸಿ, ಅದನ್ನು ಪಾತ್ರೆ ಮೇಲೆ ಸಿಂಪಡಿಸಿರುವ ಘಟನೆ ನಡೆದಿದೆ.
ಸೇವಕಿ ಈ ರೀತಿಯಾಗಿ ಕೆಲಸ ಮಾಡುತ್ತಾಳೆಂದು ಉದ್ಯಮಿ ಕುಟುಂಬಕ್ಕೆ ಎಂದಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಮನೆಯ ಸದಸ್ಯರೊಬ್ಬರು ಆಕೆಯ ಚಟುವಟಿಕೆಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ರಹಸ್ಯವಾಗಿ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸೇವಕಿ ಸಮಂತ್ರ ಪಾತ್ರೆಗಳ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋವನ್ನು ಗಮನಿಸಿ ಆಘಾತಗೊಂಡಿದ್ದಾರೆ.
ಆಘಾತಕ್ಕೊಳಗಾದ ಉದ್ಯಮಿ ತಕ್ಷಣ ನಗೀನಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ಸೇವಕಿ ವಿರುದ್ಧ ಶಾಂತಿ ಕದಡುವ ವಿಭಾಗಗಳ ಅಡಿಯಲ್ಲಿ ಪೊಲೀಸರು ಕೇಸು ದಾಕಲಿಸಿಕೊಂಡಿದ್ದು, ಗಂಭೀರವಾಗಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)