ನ್ಯೂಸ್

ಯುವತಿಯ ಮದುವೆ ಮುಹೂರ್ತದ ವೇಳೆ ಸಿನಿಮೀಯ ಸ್ಟೈಲ್​ನಲ್ಲಿ ಕೊಡಲಿ ಹಿಡಿದು ಬಂದ ಪ್ರೇಮಿ! | Wedding

ಉತ್ತರಪ್ರದೇಶ: ಅದ್ದೂರಿ ಮದುವೆ(Wedding )ಸಂಭ್ರಮದ ನಡುವೆ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ಬಂದು ರದ್ದಾಂತ ಮಾಡುವುದರ ಜೊತೆಗೆ ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿರುವ ಘಟನೆ ಉತ್ತರ ಪ್ರದೇಶದ ಫರಿದಾಬಾದ್​ ಇತ್ತೀಚಿಗೆ ನಡೆದಿದೆ.

ಹೌದು, ತನ್ನ ಗೆಳತಿಯ ಮದುವೆ ಆಗಮಿಸಿದ ವ್ಯಕ್ತಿಯೊಬ್ಬ(ವಿವಾಹಿತ ಪ್ರೇಮಿ) ಕೊಡಲಿ ಹಿಡಿದು ಸಾಕಷ್ಟು ಗದ್ದಲ ಎಬ್ಬಿಸಿದ್ದಾನೆ. ಇದನ್ನು ಕಂಡ ಎಲ್ಲರೂ ಆತನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾನು ಬ್ಯಾಗ್​ನಲ್ಲಿ ತಂದಿದ್ದ ಪೆಟ್ರೋಲ್​ ಬಾಟಲ್​ ತೆಗೆದು ಪೊಲೀಸರ ಮುಂದೆಯೇ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾನೆ. ಕೂಡಲೇ ಬೆಂಕಿ ನಂದಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಏನು?

ಆರೋಪಿ ಧರ್ಮವೀರ್​ ಎಂಬ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, ಮೂರು ಮಕ್ಕಳ ತಂದೆಯಾಗಿದ್ದಾನೆ. ಧರ್ಮವೀರ್​ ಮಥುರಾದಲ್ಲಿ ಕೆಫೆವೊಂದನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿದ್ದಾರೆ. ಅಲ್ಲಿ ಈ ಯುವತಿ(ಮದುವೆಯಾಗುತ್ತಿರುವ) ಪರಿಚಯ ಆಗಿದೆ, ಅಂದಿನಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದೆ. ಆಕೆಯನ್ನು ಮದುವೆಯಾಗುವುದಾಗಿ ಭರವಸೆ ಕೂಡ ನೀಡಿದ್ದನು.

ಆದರೆ, ಆರೋಪಿ ಧರ್ಮವೀರ್​ ಈ ಹಿಂದೆ ಮದುವೆ ಆಗಿರುವ ವಿಚಾರ ಆಕೆಗೆ ಗೊತ್ತಿರಲಿಲ್ಲ. ಗೊತ್ತಾದ ಬಳಿಕ ಈತನಿಂದ ದೂರ ಸರಿದಿದ್ದಾಳೆ. ಇದೀಗ ಆಕೆಗೆ ನಿಶ್ಚಿತಾರ್ಥ ಆಗಿದೆ. ಮದುವೆ ಬಗ್ಗೆ ತಿಳಿದ ಮಂಟಪಕ್ಕೆ ಬಂದು '' ಆಕೆ ನನ್ನವಳು, ಮದುವೆ ನಡೆಯಲು ಬಿಡುವುದಿಲ್ಲ, ಈ ಹುಡುಗಿ ಬೇರೆಯವರನ್ನು ಮದುವೆ ಆಗೋದು ಇಷ್ಟವಿಲ್ಲ'' ಎಂದು ಕೊಡಲಿ ಹಿಡಿದು ರದ್ದಾಂತ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಂಕಿ ಹಚ್ಚಿಕೊಂಡ ಆರೋಪಿಗೆ ದೇಹವು ಸುಮಾರು ಶೇ.50ರಷ್ಟು ಸುಟ್ಟಿದೆ. ಸದ್ಯಕ್ಕೆ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)