ನ್ಯೂಸ್

ಅಜ್ಜಿ ಜತೆ ಮನೆಗೆ ಬರುತ್ತಿದ್ದ ಬಾಲಕಿ ಮೇಲೆ ಹರಿದ ಲಾರಿ; ಸ್ಥಳದಲ್ಲೇ ಪ್ರಾಣ ಬಿಟ್ಟ 2ರ ಕಂದಮ್ಮ

ದಾವಣಗೆರೆ: ಅಂಗನವಾಡಿ ಮುಗಿಸಿ ಅಜ್ಜಿ ಜತೆ ಮನೆಗೆ ಬರುತ್ತಿದ್ದ ಬಾಲಕಿ ಮೇಲೆ ಲಾರಿ ಹರಿದು 2 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ.

ಕುಂದುವಾಡ ಗ್ರಾಮದ ಗಣೇಶ್ ಎಂಬುವವರ ಪುತ್ರಿ ಚರಸ್ವಿ(2) ಮೃತಪಟ್ಟ ದುರ್ದೈವಿ ಬಾಲಕಿ. ಎಂಸ್ಯಾಂಡ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಚಕ್ರ ಹರಿದ ರಭಸಕ್ಕೆ ಬಾಲಕಿ ಮೆದುಳು ಚಿದ್ರ..ಚಿದ್ರ ಗೊಂಡು, ಮುಖ ಗುರುತು ಸಿಗದಂತಾಗಿದೆ. ಇನ್ನು KA 17, D5017 ನಂಬರ್​ರಿನ ಟಿಪ್ಪರ್ ಲಾರಿ ಇದಾಗಿದ್ದು, ಚಾಲಕನ ಅಜಾಗರುಕತೆಯಿಂದ ಈ ಅವಘಡ ನಡೆದಿದೆ.

ಲಾರಿ ಚಾಲಕ ಮತ್ತು ಮಾಲೀಕನ ಬಂಧನಕ್ಕೆ ಆಗ್ರಹಿಸಿ ಮತ್ತು ಘಟನೆ ಖಂಡಿಸಿ ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ, ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಕ್ಲೀನರ್​​ನನ್ನು ಪೊಲೀಸರು ವಶಕ್ಕೆ ಪಡೆದು ಚಾಲಕನಾಗಿ ಬಲೆ ಬೀಸಿದ್ದಾರೆ.