ನ್ಯೂಸ್

ಲವ್ ಮಾಡಿ ನೆಗ್ಲೆಕ್ಟ್ ಮಾಡಿದ ಕಾಂಗೋ ಯುವಕ; ಪ್ರಾಣ ಕಳೆದುಕೊಂಡ ಕೊಲ್ಕತಾ ಯುವತಿ!

ಬೆಂಗಳೂರು: ಬಿಎಸ್ಸಿ ವ್ಯಾಸಾಂಗ‌ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನಿನ್ನೆ(ಡಿ.15) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾಂಗೋ ದೇಶದ ಯುವಕ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ಮೂಲದ ವಿದ್ಯಾರ್ಥಿನಿ ರಮಿತಾ ರಾಯ್, ಆಚಾರ್ಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ವಿದ್ಯಾರ್ಥಿನಿ ರಮಿತಾ ರಾಯ್​ಗೆ ಸಾಮಾಜಿಕ ಜಾಲತಾಣದ ಮೂಲಕ ಕಾಂಗೋ ದೇಶದ ಕ್ರಿಸ್ ಎಂಬ ಯುವಕನ ಪರಿಚಯವಾಗಿತ್ತು. ಇಬ್ಬರೂ ಸಾಮಾಜಿಕ ಜಾಲತಾಣದಲ್ಲೇ ಕಳೆದ ಎರಡು ವರ್ಷಗಳಿಂದ ಮಾತುಕಥೆ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಇದರಿಂದ ರಮಿತಾ ರಾಯ್, ಕ್ರಿಸ್ ಜತೆಗೆ ಅಷ್ಟಾಗಿ ಮಾತನಡುತ್ತಿರಲಿಲ್ಲ. ಇದರಿಂದ ರಮಿತಾ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.

ಕ್ರಿಸ್ ಜತೆಗಿನ ಭಿನ್ನಾಭಿಪ್ರಾಯ, ಖಿನ್ನತೆಗೆ ದೂಡಿದೆ. ಇದರಿಂದ ಮನನೊಂದ ರಮಿತಾ ವಾಸವಿದ್ದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ವಿದ್ಯಾರ್ಥಿನಿ ರಮಿತಾ ಮೃತದೇಹದ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್​ ಎಂದು ಪ್ರಕರಣ ದಾಖಲಾಗಿದೆ.