ನ್ಯೂಸ್

ನಿಮ್ಗೆ ಎಷ್ಟು ಮದ್ವೆ ಆಗಿದೆ? ಯಾರೊಂದಿಗೆ ಡಿವೋರ್ಸ್​ ಆಗಿದೆ, ಗಂಡಂದಿರು ಬಿಡಲು ಕಾರಣ? ಸದ್ಯ ಯಾರ ಜತೆ ಸಂಸಾರ ಮಾಡ್ತಿದ್ದೀರಿ...

ಕೋಲಾರ: ಯಾವುದಾದರು ಕಾಮಗಾರಿ, ಯೋಜನೆ, ಖರ್ಚುವೆಚ್ಚ, ಅನುದಾನ ಬಳಕೆ ಕುರಿತು ಆರ್​ಟಿಐ ಮೂಲಕ ಮಾಹಿತಿ ಕೇಳೋದು ಸಹಜ. ಆದೆ ಇಲ್ಲೊಬ್ಬ ಭೂಪ, ಮಹಿಳಾ ತಹಸೀಲ್ದಾರ್​​ ಅವರ ವೈಯಕ್ತಿಯ ಜೀವನದ ಬಗ್ಗೆ ಮಾಹಿತಿ ಕೇಳಿ ಜೈಲು ಸೇರಿದ್ದಾನೆ.

ಇದುವರೆಗೆ ಅವರು ಎಷ್ಟು ಮದ್ವೆ ಆಗಿದ್ದಾರೆ? ಯಾರೊಂದಿಗೆ ಡಿವೋರ್ಸ್​ ಆಗಿದೆ? ಡಿವೋರ್ಸ್​ ಆಗಿದ್ದರೆ ಯಾವ ಕಾರಣಕ್ಕೆ ಆಯ್ತು? ಯಾರಿಗೆಲ್ಲಾ ಇನ್ನೂ ಡಿವೋರ್ಸ್​ ಆಗಿಲ್ಲ? ಅವರಿಂದ ಗಂಡಂದಿರು ದೂರವಾಗಲು ಕಾರಣ ಏನು? ಅವರ ಗಂಡಂದಿರು ಯಾವ ಇಲಾಖೆಯಲ್ಲಿ ಕೆಲಸ‌ ಮಾಡುತ್ತಿದ್ದಾರೆ? ಸದ್ಯ ಯಾರ ಜತೆ ಮಹಿಳಾ ಅಧಿಕಾರಿ ಸಂಸಾರ ಮಾಡುತ್ತಿದ್ದಾರೆ. ಮದ್ವೆ ಮಾಡಿಕೊಂಡದ್ದು ಎಲ್ಲಿ? ಲಗ್ನ ಪತ್ರಿಕೆಗಳು, ಕಲ್ಯಾಣ ಮಂಟಪಗಳ ವಿವರ ಕೊಡಿ... ಎಂಬಿತ್ಯಾದಿ ಅಸಂಬಂಧ ಪ್ರಶ್ನೆಗಳನ್ನ ಆರ್​ಟಿಐ ಅರ್ಜಿಯಲ್ಲಿ ಉಲ್ಲೇಖಿಸಿ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಮಂಡಿಕಲ್ ನಾಗರಾಜ್ ಎಂಬಾತ ಮಾಹಿತಿ ಕೇಳಿದ್ದ.

ಮಹಿಳಾ ಅಧಿಕಾರಿಯ ಬಗ್ಗೆ ಆಕ್ಷೇಪಾರ್ಹವಾಗಿ ವೈಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ ಕೇಳಿದ ಆರ್​ಟಿಐ ಕಾರ್ಯಕರ್ತನನ್ನು ಮುಳಬಾಗಲು ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.