ನ್ಯೂಸ್

ಕರೊನಾ ಭೀತಿ ನಡುವೆ ವಕ್ಕರಿಸಿದ ಮತ್ತೊಂದು ಕಾಯಿಲೆ! ಬೆಚ್ಚಿಬಿದ್ದ ಜನ

ಸಾಗರ: ಕರೊನಾ ಸೋಂಕಿಗೆ ಇಡೀ ಜಗತ್ತು ತಲ್ಲಣಗೊಂಡಿದೆ. ಈ ನಡುವೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಮತ್ತೊಮ್ಮೆ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಜನವರಿ ನಂತರ ಇದೇ ಮೊದಲ ಬಾರಿಗೆ ಸಾಗರ ತಾಲೂಕಿನ ತ್ಯಾಗರ್ತಿ ಸಮೀಪ ಮುತ್ತಲಬೈಲು ಗ್ರಾಮದ 18 ವರ್ಷದ ಯುವಕ, ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯ 40 ವರ್ಷದ ಮಹಿಳೆ ಹಾಗೂ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ 40 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

2019ರಲ್ಲಿ ಸಾಗರ ತಾಲೂಕು ಅರಳಗೋಡು ಸುತ್ತಮುತ್ತ ಭಾರಿ ಸಾವು-ನೋವು ಉಂಟುಮಾಡಿದ್ದ ಮಂಗನ ಕಾಯಿಲೆ ಇಲ್ಲಿಯವರೆಗೂ ಸಂರ್ಪೂಣ ಹತೋಟಿಯಲ್ಲಿತ್ತು. ಸರ್ಕಾರ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಪ್ರಸ್ತುತ ಮೂವರಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.