ನ್ಯೂಸ್

ಜಡ್ಜ್​ಗಳ ವೇತನ 3 ಪಟ್ಟು ಏರಿಕೆ

arunakunigal

ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ (ಎಸ್​ಎನ್​ಜೆಪಿ) ಶಿಫಾರಸುಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಅನುಮೋದನೆ ನೀಡಿದೆ. ಅದರ ಅನುಷ್ಠಾನದಿಂದ ದೇಶದ ಸುಮಾರು 25,000 ನ್ಯಾಯಮೂರ್ತಿಗಳು ಹಾಗೂ ನ್ಯಾಯಾಧೀಶರ ಮೂಲ ವೇತನ ಮೂರು ಪಟ್ಟು ಹೆಚ್ಚಲಿದೆ. ಎಸ್​ಎನ್​ಜೆಪಿ ಶಿಫಾರಿತ ವೇತನವನ್ನು 2016ರ ಜನವರಿ 1ರಿಂದಲೇ ಪೂರ್ವಾನ್ವಯಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಸೂಚಿಸಿದ್ದಾರೆ.

  • 2016 ಜನವರಿ 1ರಂದು ಕೇಂದ್ರ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸು ಜಾರಿಯಾಗಿತ್ತು. ಆ ದಿನಾಂಕದಿಂದಲೇ ಎಸ್​ಎನ್​ಜೆಪಿ ಅನುಷ್ಠಾನಕ್ಕೆ ಸಿಜೆಐ ರಮಣ ಸಲಹೆ ನೀಡಿದ್ದರು.
  • ಎಸ್​ಎನ್​ಜೆಪಿ ಜಾರಿಯಾದರೆ ಮೂಲ ವೇತನದಲ್ಲಿ 2.81 ಪಟ್ಟು ಏರಿಕೆಯಾಗುತ್ತದೆ.
  • 24,485 - ಪ್ರಸ್ತುತ ದೇಶದಲ್ಲಿ ಮಂಜೂರಾಗಿರುವ ನ್ಯಾಯಾಂಗ ಅಧಿಕಾರಿಗಳ ಸಂಖ್ಯೆ.
  • ನೇಮಕವಾಗಿರುವುದು 19,292 ಜಡ್ಜ್​ಗಳು
  • ನಿವೃತ್ತ ಜಡ್ಜ್​ಗಳ ಪಿಂಚಣಿ ಲೆಕ್ಕಾಚಾರದ ವಿಚಾರ ಪ್ರಸ್ತಾಪಿಸಿದಾಗ, ಸಿಜೆಐ ರಮಣ ಅವರು ಹಾಲಿ ಸೇವೆಯಲ್ಲಿರುವ ನ್ಯಾಯಾಧೀಶರಿಗೆ ಗೌರವಯುತ ವೇತನ ದೊರೆಯುವುದು ಅಗತ್ಯ ಎಂದು ಪ್ರತಿಪಾದಿಸಿದರು.
  • 30% ಏರಿಕೆ - ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಡ್ಜ್​ಗಳಿಗೆ ಈಗಾಗಲೇ ಮೂಲ ವೇತನದಲ್ಲಿ ಶೇಕಡ 30 ಹೆಚ್ಚಳ ಮಾಡಲಾಗಿದೆ.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 30% ಬಾಕಿ ವೇತನವನ್ನು ಮುಂದಿನ ಮೂರು ತಿಂಗಳು ಹಾಗೂ ಶೇಕಡ 30ನ್ನು ಅದರ ನಂತರದ ಮೂರು ತಿಂಗಳಲ್ಲಿ ಪಾವತಿಸಬೇಕು. ಉಳಿದಿದ್ದನ್ನು 2023 ಜೂನ್ 30ರೊಳಗೆ ಇತ್ಯರ್ಥಪಡಿಸಬೇಕು ಎಂದು ಸಿಜೆಐ ನೇತೃತ್ವದ ಪೀಠ ತಾಕೀತು ಮಾಡಿದೆ.