ನ್ಯೂಸ್

ಹೃದಯಾಘಾತ: ವಾಯುವಿಹಾರ ಮುಗಿಸಿ ಮನೆಗೆ ಬರುತ್ತಿದ್ದಂತೆ ಡಿವೈಎಸ್ಪಿ ರಮೇಶ್ ಸಾವು

arunakunigal

ಚಿತ್ರದುರ್ಗ: ಡಿವೈಎಸ್ಪಿ ರಮೇಶ್(55) ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ನಿಧನರಾದರು. ಚಿತ್ರದುರ್ಗದಲ್ಲಿ ಡಿಸಿಆರ್​ಬಿ ಬ್ರಾಂಚ್​ನಲ್ಲಿ ಡಿವೈಎಸ್ಪಿ ಆಗಿದ್ದ ರಮೇಶ್, ಇಂದು ಬೆಳಗ್ಗೆ ವಾಯುವಿಹಾರ ಹೋಗಿದ್ದರು.

ವಾಯುವಿಹಾರ ಮುಗಿಸಿ ವಾಪಸ್ ಬಂದ ರಮೇಶ್​ಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಹೊರಡುತ್ತಿದ್ದಂತೆಯೇ ರಮೇಶ್​ ಕೊನೆಯುಸಿರೆಳೆದಿದ್ದಾರೆ.