ನ್ಯೂಸ್

ಕಾವೇರಿ ನೀರು ಬಿಡುವಂತೆ ಆಗ್ರಹ; ಸತ್ತ ಇಲಿಗಳನ್ನು ಬಾಯಲ್ಲಿಡಿದುಕೊಂಡು ಪ್ರತಿಭಟಿಸಿದ ತಮಿಳುನಾಡು ರೈತರು

ತಮಿಳುನಾಡು: ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಇಂದು ಬೆಂಗಳೂರಿನಾದ್ಯಂತ ಬಂದ್​ ಹಮ್ಮಿಕೊಳ್ಳಲಾಗಿದೆ. ಅತ್ತ ತಮಿಳುನಾಡಿನಲ್ಲಿ ರೈತರು ಕರ್ನಾಟಕ ಸರ್ಕಾರ ನೀರನ್ನು ಹರಿಸಬೇಕೆಂದು ಆಗ್ರಹಿಸಿ, ಸತ್ತ ಇಲಿಗಳನ್ನು ತಮ್ಮ ಬಾಯಲ್ಲಿಡಿದುಕೊಂಡು ಪ್ರತಿಭಟನೆ ನಡೆಸಿರುವುದು ಇದೀಗ ಮುನ್ನೆಲೆಗೆ ಬಂದಿದೆ.

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ರೈತರ ಗುಂಪೊಂದು ಸತ್ತ ಇಲಿಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಒತ್ತಾಯಿಸಿದೆ.

ತಮ್ಮ ಅಲ್ಪಾವಧಿ ಬೆಳೆಗೆ ನೀರಿನ ಅಗತ್ಯ ಹೆಚ್ಚಿದೆ. ಹೀಗಾಗಿ ಕರ್ನಾಟಕ ಸರ್ಕಾರ ತಮಗೆ ಕಾವೇರಿ ನೀರನ್ನು ಹರಿಸಬೇಕು ಎಂದು ಈ ಗುಂಪಿನ ರೈತರು ಆಗ್ರಹಿಸಿದ್ದಾರೆ. ಬೆಂಗಳೂರಿನ ಬಂದ್​ ಬೆನ್ನಲ್ಲೇ ಸೆ. 29 ರಂದು ಕರ್ನಾಟಕ ಬಂದ್​ ನಡೆಸಲು ವಿವಿಧ ಸಂಘಟನೆಗಳು ಈಗಾಗಲೇ ಕರೆ ಕೊಟ್ಟಿದೆ.