ನ್ಯೂಸ್

ಬೆಂಕಿ ನಂದಿಸುವ ಕಾರ್ಯಕ್ಕೆ 90 ಮೀಟರ್ ಎತ್ತರದ ಲ್ಯಾಡರ್ ಪ್ಲ್ಯಾಟ್​ಫಾರ್ಮ್: ಅಗ್ನಿಶಾಮಕ ದಳಕ್ಕೆ ನಾಳೆ ಹಸ್ತಾಂತರ

arunakunigal

ಬೆಂಗಳೂರು: ತುರ್ತು ಅಗ್ನಿ ಅವಘಡ ಸಂದರ್ಭದಲ್ಲಿ ಸುಮಾರು 90 ಮೀಟರ್ ಎತ್ತರದವರೆಗೂ ತಲುಪಿ ಬೆಂಕಿ ನಂದಿಸುವ ಹಾಗೂ ಅಪಾಯದಲ್ಲಿ ಸಿಲುಕಿದ ನಾಗರಿಕರನ್ನು ರಕ್ಷಿಸಲು ಅನುವಾಗುವ 'ಏರಿಯಲ್ ಲ್ಯಾಡರ್ ಪ್ಲ್ಯಾಟ್​ಫಾರ್ಮ್' ಅನ್ನು ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ನಾಳೆ(ಗುರುವಾರ) ಸಿಎಂ ಹಸ್ತಾಂತರ ಮಾಡಲಿದ್ದಾರೆ.

ಈ ಸಂಬಂಧ ವಿಧಾನಸೌಧದ ಗ್ರಾಂಡ್ ಸ್ಟೆಪ್ ಮುಂಭಾಗ ನಾಳೆ ಬೆಳಗ್ಗೆ 10ಕ್ಕೆ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ. 90 ಮೀಟರ್ ಎತ್ತರಕ್ಕೆ ನಿಲುಕಲು ಸಾಧ್ಯವಾಗುವ ಏಣಿಯನ್ನು ರಾಜ್ಯ ಸರ್ಕಾರ ಫಿನ್ಲ್ಯಾಂಡ್ ದೇಶದಿಂದ 30 ಕೋಟಿ ರೂ. ವೆಚ್ಚದಲ್ಲಿ ಆಮದು ಮಾಡಿಕೊಂಡಿದ್ದು, ಸಾರ್ವಜನಿಕ ಸೇವೆಗೆ ಸಮರ್ಪಿಸಲಿದೆ.