ನ್ಯೂಸ್

ಚಾರ್ಮಾಡಿ ಘಾಟ್​​ನಲ್ಲಿ ಕಾಡ್ಗಿಚ್ಚು: ಹೊತ್ತಿ ಉರಿದ ಅರಣ್ಯ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್​​ನಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಮಲೆಯಮಾರುತ ಸಮೀಪ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಮಲಯಮಾರುತ ಗುಡ್ಡದಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.

ಪ್ರವಾಸಿಗರು ಸೇದಿ ಬಿಸಾಡಿದ ಸಿಗರೇಟ್​ ತುಂಡಿನ ಕಿಡಿ ಕಾಡಿಗೆ ಬೆಂಕಿ ಹೊತ್ತಿದೆ. ಇಲ್ಲವೇ ಯಾರೋ ಕಿಡಿಗೇಡಿಗಳು ಬೇಕಂತಲೇ ಬೆಂಕಿ ಹಚ್ಚಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.