ನ್ಯೂಸ್

ಕನ್ನಡದ ಮತ್ತೊಬ್ಬ ಹಿರಿಯ ನಟ ಕರೊನಾಗೆ ಬಲಿ: ಶಂಖನಾದ ಅರವಿಂದ್​ ಇನ್ನಿಲ್ಲ

ಬೆಂಗಳೂರು: ಮಹಾಮಾರಿ ಕರೊನಾಗೆ ಸ್ಯಾಂಡಲ್​ವುಡ್​ನ ಮತ್ತೊಬ್ಬ ಹಿರಿಯ ನಟ ಬಲಿಯಾಗಿದ್ದಾರೆ. ನಟ, ನಿರ್ಮಾಪಕ ಶಂಖನಾದ ಅರವಿಂದ್ ಇಂದು ಮೃತಪಟ್ಟಿದ್ದಾರೆ.

70 ವರ್ಷ ವಯಸ್ಸಿನ ಶಂಖನಾದ ಅರವಿಂದ್ ಅವರಿಗೆ ಕಳೆದ ವಾರ ಕರೊನಾ ಸೋಂಕು ತಗುಲಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು(ಶುಕ್ರವಾರ) ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಮೂರು ತಿಂಗಳ ಹಿಂದಷ್ಟೆ ಶಂಖನಾದ ಅವರ ಪತ್ನಿ ರಮಾ ಅರವಿಂದ್ ಅನಾರೋಗ್ಯದಿಂದ ನಿಧನಾರಗಿದ್ದರು.

ಕಳೆದ ವಾರ ನಟಿ ಮಾಲಾಶ್ರಿ ಅವರ ಪತಿ, ಸಿನಿಮಾ ನಿರ್ಮಾಕ ಕೋಟಿ ರಾಮು ನಿಧನರಾಗಿದ್ದರು.