ಕೊಪ್ಪಳ: ತಂದೆ ಮಾಡಿದ ಸಾಲವನ್ನೇ ಮುಂದಿಟ್ಟುಕೊಂಡು ಏನೂ ಅರಿಯದ ಬಾಲಕನಿಂದ ಬೆತ್ತಲೆ ಪೂಜೆ ಮಾಡಿಸಿದ ಅಮಾನವೀಯವಾಗಿ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ.
ಹಾಸಗಲ್ ಗ್ರಾಮದ 16 ವರ್ಷದ ಬಾಲಕನೊಬ್ಬನಿಂದ ಶರಣಪ್ಪ, ವಿರುಪನಗೌಡ ಮತ್ತು ಶರಣಪ್ಪ ತಳವರ ಎಂಬುವವರು ಬೆತ್ತಲೆ ಪೂಜೆ ಮಾಡಿಸಿದ್ದಾರೆ. ಬಾಲಕನ ತಂದೆ ಸಾಲದ ಸುಳಿಗೆ ಸಿಲುಕಿದ್ದರಂತೆ.
ಇದೇ ವಿಚಾರ ಮುಂದಿಟ್ಟುಕೊಂಡ ಆ ಮೂವರು ದರುಳರು, 'ಬೆತ್ತಲೆ ಪೂಜೆ ಮಾಡಿದರೆ ದುಡ್ಡು ಸಿಗುತ್ತೆ. ನಿಮ್ಮ ಅಪ್ಪ ಮಾಡಿದ ಸಾಲವೂ ತೀರುತ್ತೆ. ಅಷ್ಟೇ ಅಲ್ಲ ಮನೆಯಲ್ಲಿನ ಬಡತನ ಕೂಡ ನಿವಾರಣೆ ಆಗುತ್ತೆ' ಎಂದು ಬಾಲಕನನ್ನು ನಂಬಿಸಿದ್ದಾರೆ.
ಬಳಿಕ ಹುಬ್ಬಳ್ಳಿಯ ರೂಮ್ವೊಂದರಲ್ಲಿ ಬಾಲಕನ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ, ಪೂಜೆ ಮಾಡುವ ನಾಟಕವಾಡಿದ್ದಾರೆ. ಅಲ್ಲದೆ, ಅದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಳೆದ ಜೂನ್ನಲ್ಲೇ ಈ ಘಟನೆ ನಡೆದಿದ್ದು, ಗ್ರಾಮದ ಕೆಲ ಜನರ ಮೊಬೈಲ್ಗೆ ಪೂಜೆ ಸಲ್ಲಿಸಿದ ವಿಡಿಯೋ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನೊಂದ ಬಾಲಕ ಮತ್ತು ಕುಟುಂಬಸ್ಥರು ನಿನ್ನೆ(ಅ.2) ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.