ಥೂ, ಇವರೆಂಥಾ ಕ್ರೂರಿಗಳು? ರಾತ್ರೋರಾತ್ರಿ ಅಮಾನುಷ ಕೃತ್ಯವೆಸಗಿ 'ದೈವಾದೇಶ' ಎಂದ ದುಷ್ಟರು.. ಈ ಸ್ಟೋರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

deli police
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಆರೋಪಿಗಳು ಹೇಳಿಕೆ ಕೇಳಿ ಪೋಲೀಸರೇ ಶಾಕ್​ ಆಗಿದ್ದಾರೆ. ಏನೂ ಅರಿಯದ ಮುಗ್ಧ ಮಗುವಿನ ತಲೆ ಕಡಿದು 'ಇದು ದೈವಾಜ್ಞೆ, ದೇವರ ಆದೇಶದ ಮೇರೆಗೆ ಮಗುವಿನ ತಲೆ ಕಡಿದು ಬಲಿ ಕೊಟ್ಟಿದ್ದೇವೆ' ಎಂದು ಕ್ರೂರಿಗಳು ಸಮರ್ಥಿಸಿಕೊಂಡಿದ್ದಾರೆ.

ಇಂತಹ ಅಮಾನವೀಯ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲನಿಯಲ್ಲಿ ನಡೆದಿದೆ. ಆರೋಪಿಗಳಿಬ್ಬರೂ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸಕ್ಕಿದ್ದ ಉತ್ತರಪ್ರದೇಶ ಮೂಲದ ಕುಟುಂಬಕ್ಕೆ ಸೇರಿದ 6 ವರ್ಷದ ಬಾಲಕನ ತಲೆಯನ್ನು ಶನಿವಾರ ರಾತ್ರಿ ಕಡಿದಿದ್ದಾರೆ. ಈ ಸುದ್ದಿ ಸುಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕ ಬಂದ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

ವಿಚಾರಣೆ ವೇಳೆ 'ಬಾಲಕ ತಲೆ ಕಡಿಯುವಂತೆ ನಮಗೆ ದೇವರ ಆದೇಶವಿತ್ತು. ಹಾಗಾಗಿ ಬಾಲಕನ ತಲೆ ಕಡಿದೆವು' ಎಂದಿದ್ದಾರೆ. ಕೊಲೆಯಾದ ಬಾಲಕನ ಕುಟುಂಬ ಮತ್ತು ಕೊಲೆ ಮಾಡಿದ ಆರೋಪಿಗಳಿಗೆ ಪರಸ್ಪರ ಪರಿಚಯವಿತ್ತು. ಇವರೆಲ್ಲೂ ಒಂದೇ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿದ್ದರು. ಕುಟುಂಬದೊಂದಿಗೆ ಯಾವುದೇ ದ್ವೇಷ ಇರಲಿಲ್ಲ. ಆದರೆ ಕುಡಿದ ಅಮಲಿನಲ್ಲಿ ತಲೆ ಕಡಿದು ದೈವಾದೇಶ ಎಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net