ನ್ಯೂಸ್

ಕಲಬುರಗಿ ESIನಲ್ಲಿ ಖಾಲಿ ಇದೆ 33 ಹುದ್ದೆ: ಅಭ್ಯರ್ಥಿಗಳಿಗೆ ಏ.29ಕ್ಕೆ ನೇರ ಸಂದರ್ಶನ

ಬೆಂಗಳೂರು: ಕಾರ್ಮಿಕರ ರಾಜ್ಯ ವಿಮಾ ನಿಗಮದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಲಬುರಗಿ ಇಎಸ್​ಐ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆಯಲ್ಲಿ ಸಹಾಯಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಹುದ್ದೆ ವಿವರ

ಸಹಾಯಕ ಪ್ರಾಧ್ಯಾಪಕ- 9

ವಿಭಾಗವಾರು ವಿವರ: ಪ್ಯಾಥೋಲಜಿ-2, ಜನರಲ್​ ಮೆಡಿಸನ್​-1, ಡರ್ಮಟಾಲಜಿ-1, ಜನರಲ್​ ಸರ್ಜರಿ-1, ರೇಡಿಯೋ ಡಯಗ್ನೋಸಿಸ್-2, ಎಮರ್ಜನ್ಸಿ ಮೆಡಿಸನ್- 1, ಫೋರೆನ್ಸಿಕ್​ ಮೆಡಿಸನ್​-1.

ಸಹ ಪ್ರಾಧ್ಯಾಪಕ- 14

ವಿಭಾಗವಾರು ವಿವರ: ಅಟಾನಮಿ-1, ಕಮ್ಯುನಿಟಿ ಮೆಡಿಸನ್​-2, ಮೈಕ್ರೋಬಯಾಲಜಿ-1, ಜನರಲ್​ ಮೆಡಿಸನ್-1, ಸೈಕಿಯಾಟ್ರಿ-1, ಪೀಡಿಯಾಟ್ರಿಕ್ಸ್​-1, ಜನರಲ್​ ಸರ್ಜರಿ-4, ರೇಡಿಯೋ ಡಯಗ್ನೋಸಿಸ್​-2, ಎಮರ್ಜೆನ್ಸಿ ಮೆಡಿಸನ್​-1.

ಸಹಾಯಕ ಪ್ರಾಧ್ಯಾಪಕರಲ್ಲಿ 7 ಸ್ಥಾನವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗೆ, 2 ಸ್ಥಾನವನ್ನು ಎಸ್ಟಿ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಸಹ ಪ್ರಾಧ್ಯಾಪಕರಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 10 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 3 ಸ್ಥಾನ ಮತ್ತು ಎಸ್ಟಿಗೆ 1 ಸ್ಥಾನ ಮೀಸಲು. ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈ ಅವಧಿಯಲ್ಲಿ ಅಭ್ಯರ್ಥಿಗಳು ಹೊರಗಡೆ ಬೇರೆ ಕೆಲಸ ಮಾಡಲು ಅವಕಾಶ ಇರುವುದಿಲ್ಲ.

ಅರ್ಹತಾ ಮಾನದಂಡ: ಎಂಸಿಐ/ ಎನ್​ಎಂಸಿ ನಿಯಮಾನುಸಾರ ವಿದ್ಯಾರ್ಹತೆ ಕೇಳಲಾಗಿದ್ದು, ಗರಿಷ್ಠ 69 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಸಹಾಯಕ ಪ್ರಾಧ್ಯಾಪಕರಿಗೆ ಮಾಸಿಕ 1,06,000 ರೂ. ಹಾಗೂ ಸಹ ಪ್ರಾಧ್ಯಾಪಕರಿಗೆ ಮಾಸಿಕ 92,000 ರೂ. ವೇತನ ಇದ್ದು, ಇತರ ಯಾವುದೇ ಭತ್ಯೆ ಇರುವುದಿಲ್ಲ.

ಸೂಚನೆ: ಅಧಿಸೂಚನೆ ಜತೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂದರ್ಶನದ ದಿನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ತಮ್ಮ ಮಾಸಿಕ ವೇತನ ಮೊತ್ತವನ್ನೇ ಸೇವಾ ಬಾಂಡ್​ ಆಗಿ ಸಲ್ಲಿಸಬೇಕಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಸಂದರ್ಶನದಲ್ಲಿನ ಪಾಲ್ಗೊಳ್ಳುವಿಕೆ ಆಧರಿಸಿ ಆಯ್ಕೆ ಮಾಡಲಾಗುವುದು.

ಸಂದರ್ಶನ ನಡೆಯುವ ದಿನಾಂಕ: 29.4.2022 (ಬೆಳಗ್ಗೆ 9 ರಿಂದ 10.30ರ ಒಳಗೆ ನೋಂದಾಯಿತರಾಗಿರಬೇಕು)

ಸಂದರ್ಶನ ನಡೆಯುವ ಸ್ಥಳ: ಇಎಸ್​ಐಸಿ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆ, ಸೀಡಂ ರಸ್ತೆ, ಕಲಬುರಗಿ- 585 106

ಅಧಿಸೂಚನೆಗೆ: https://bit.ly/3KSKvFd

ಮಾಹಿತಿಗೆ: www.esic.nic.in