ನ್ಯೂಸ್

ಪುನೀತ್ ಅಗಲಿಕೆ ವಿಚಾರ ಡಾ.ರಾಜ್ ಸಹೋದರಿಗೆ ಇನ್ನೂ ಗೊತ್ತಿಲ್ಲ

ಚಾಮರಾಜನಗರ: ನಟ ಪುನೀತ್ ರಾಜ್​ಕುಮಾರ್​ ಅಗಲಿಕೆಯ ವಿಚಾರ ಡಾ.ರಾಜ್​ಕುಮಾರ್​ ಅವರ ಸಹೋದರಿ ನಾಗಮ್ಮ ಅವರಿಗೆ ಇನ್ನೂ ಗೊತ್ತಿಲ್ಲ. ಗಾಜನೂರಿನಲ್ಲಿರುವ ನಾಗಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ರೀತಿಯ ಅಣ್ಣನ ಕಿರಿ ಮಗ ಇನ್ನಿಲ್ಲ ಎಂಬ ವಿಷಯ ಗೊತ್ತಾದರೆ ನಾಗಮ್ಮ ಅವರಿಗೆ ಆಘಾತವಾಗಬಹುದೆಂಬ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿಷಯ ತಿಳಿಸಿಲ್ಲ.

ನಾಗಮ್ಮ ಅವರ ಆರೈಕೆಗೆ ಇಬ್ಬರು ದಾದಿಯರನ್ನು ಡಾ.ರಾಜ್ ಪುತ್ರರು ನೇಮಕ ಮಾಡಿದ್ದಾರೆ. ನಾಗಮ್ಮ ಅವರಿಗೆ ಪುನೀತ್ ರಾಜ್​ಕುಮಾರ್ ಅಚ್ಚುಮೆಚ್ಚಿನ ಹುಡುಗ. ಪುನೀತ್ ಕಂಡರೆ ಪಂಚಪ್ರಾಣ. ರಾಜ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಸಿನಿಮಾಗಳನ್ನು ಮಾತ್ರ ನಾಗಮ್ಮ ನೋಡುತ್ತಿದ್ದರಂತೆ.