ನ್ಯೂಸ್

ದೊಡ್ಡಗಾಜನೂರಿಂದ ಬೆಂಗಳೂರಿಗೆ ಹೊರಟ ಡಾ.ರಾಜ್​ಕುಮಾರ್​- ಡಾ.ಪುನೀತ್‌ ಅಮರ ಜ್ಯೋತಿ ಯಾತ್ರೆ

ಚಾಮರಾಜನಗರ: ಏ.24ರಂದು ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನ. ಈ ಹಿನ್ನೆಲೆ ಕರ್ಮ ಭೂಮಿಯಿಂದ ಪುಣ್ಯಭೂಮಿವರೆಗೆ ಡಾ.ರಾಜ್ ಹಾಗೂ ಡಾ.ಪುನೀತ್‌ ರಾಜ್‌ಕುಮಾರ್ ಅವರ ಅಮರ ಜ್ಯೋತಿ ಯಾತ್ರೆ ಆರಂಭಗೊಂಡಿದೆ.

ಡಾ.ರಾಜ್​ಕುಮಾರ್​ ಅವರ ಹುಟ್ಟೂರು ದೊಡ್ಡಗಾಜನೂರಿನಲ್ಲಿ ಅಮರ ಜ್ಯೋತಿ ಯಾತ್ರೆಗೆ ಡಾ.ರಾಜ್ ಸಹೋದರಿ ನಾಗಮ್ಮ ಗುರುವಾರ ಚಾಲನೆ ನೀಡಿದರು. ದೊಡ್ಮನೆ ಕುಟುಂಬದ ಅಭಿಮಾನಿಗಳ ಬಳಗವು ಹಮ್ಮಿಕೊಂಡಿರುವ ಈ ಯಾತ್ರೆಯು ಗಾಜನೂರಿನಿಂದ ಹೊರಟು ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಮೂಲಕ ತೆರಳಿ ಏ.24ರಂದು ಬೆಂಗಳೂರಿನಲ್ಲಿರುವ ಡಾ.ರಾಜ್ ಮತ್ತು ಅಪ್ಪು ಸಮಾಧಿ ತಲುಪಲಿದೆ.