ನ್ಯೂಸ್

ಬೆಂಗಳೂರಿಗೆ ಎಂಟ್ರಿ ಕೊಟ್ಟ ಜಿಂಕೆ ರಸ್ತೆ ಅಪಘಾತಕ್ಕೆ ಬಲಿ

ಬೆಂಗಳೂರು: ಆಹಾರ ಅರಸಿ ಹಾಡಿನಿಂದ ಮಹಾನಗರಿ ಬೆಂಗಳೂರಿನ ನಗರದೊಳಗೆ ಬಂದಿರುವ ಜಿಂಕೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದೆ. ಈ ಘಟನೆ ಕೋರಮಂಗಲದ 100 ಫೀಟ್ ರಸ್ತೆಯಲ್ಲಿ ನಡೆದಿದೆ.

ನಗರದೊಳಗೆ ಬಂದಿದ್ದ ಜಿಂಕೆ  ಅಪರಿಚಿತ ವಾಹನಕ್ಕೆ ಸಿಲುಕಿ ಜಿಂಕೆ ಸಾವನ್ನಪ್ಪಿದ್ದು, ಆರ್ಮಿ ಫೋರ್ಸ್ ರಸ್ತೆ ಬಳಿ ಘಟನೆ ನಡೆದಿದೆ.  ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.

ಅಪಘಾತ ನಡೆದ ಜಾಗಕ್ಕೆ ಗ್ರೀನ್ ಆರ್ಮಿ ಫೋರ್ಸ್ ಧಾವಿಸಿ ಜಿಂಕೆಗೆ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಜಿಂಕೆ ಕೊನೆಯುಸಿರೆಳೆದಿತ್ತು. ಜಿಂಕೆಯ ಮೃತದೇಹವನ್ನು ಜಾಗೃತದಳ ಅರಣ್ಯ ಇಲಾಖೆಗೆ ಶಿಫ್ಟ್ ಮಾಡಿದೆ.