ನ್ಯೂಸ್

ಮುದ್ದು ಮುದ್ದಾಗಿ ಮಾತನಾಡುತ್ತಲೇ ಬೆತ್ತಲಾಗಿ ನುಲಿದ ಯುವತಿ! ಕಣ್ತುಂಬಿಕೊಂಡವನಿಗೆ ಕಾದಿತ್ತು ಗಂಡಾಂತರ

ರಾಮನಗರ: ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಅಪರಿಚಿತ ಸುಂದರ ಯುವತಿಯೇ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ ಮಾಡಿ, ಮಧುರವಾಗಿ ಮಾತಾನಾಡಿದ್ದಾಳೆ. ಇದಾದ ಕೆಲವೇ ಕ್ಷಣದಲ್ಲಿ ವಿಡಿಯೋ ಕಾಲ್​ನಲ್ಲೇ ಬೆತ್ತಲಾಗಿ ಕಾಣಿಸಿಕೊಂಡೂ ನುಲಿದಾಡಿದ್ದಾಳೆ... ಮುಂದೇನಾಯ್ತು ಗೊತ್ತಾ?

ಎರಡು ದಿನದ ಹಿಂದೆ ಮಾಗಡಿಯ ವ್ಯಕ್ತಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಕರೆ ಬಂದಿದೆ. ಆ ವೇಳೆ ಆತ ಬಿಜಿ ಇದ್ದಿದ್ದರಿಂದ ಕರೆ ಸ್ವೀಕರಿಸಿರಲಿಲ್ಲ. ನಂತರ ತಾನೇ ಸ್ವಲ್ಪ ಹೊತ್ತಿನ ನಂತರ ಕರೆ ಮಾಡಿದ್ದಾನೆ. ಆಗ ಯುವತಿಯೊಬ್ಬಳು ಇಂಗ್ಲಿಷ್‌ನಲ್ಲಿಯೇ ಉಲಿಯತೊಡಗಿದ್ದಳು. ನೋಡಲು ಸುಂದರವಾಗಿದ್ದ ಆ ಯುವತಿ ಕೆಲವು ಸೆಕೆಂಡ್‌ ಮಾತನಾಡಿ ಕರೆಯನ್ನು ಡಿಸ್ಕನೆಕ್ಟ್ ಮಾಡಿದ್ದಾಳೆ. ಮತ್ತೆ ಕರೆ ಮಾಡಿದ ಯುವತಿ ಬೆತ್ತಲಾಗಿ ನುಲಿಯುತ್ತಾ ಆ ವ್ಯಕ್ತಿಯೊಂದಿಗೆ ಮಾತನಾಡಲು ಶುರು ಮಾಡಿದ್ದಾಳೆ.

ಬೆತ್ತಲಾಗಿ ವಿಡಿಯೋ ಕರೆ ಮಾಡಿದ ಆಕೆಗೆ ಈ ವ್ಯಕ್ತಿ ಬಾಯಿಗೆ ಬಂದಂತೆ ಬೈದರೂ ಲೆಕ್ಕಿಸದೆ ಸುಮಾರು 20 ಸೆಕೆಂಡ್‌ಗೂ ಹೆಚ್ಚು ಕಾಲ ಮಾತನಾಡಿ ಕಾಲ್ ಡಿಸ್ಕನೆಕ್ಟ್ ಮಾಡಿದ್ದಾಳೆ. ಇದಾದ ಕೆಲವೇ ಹೊತ್ತಿನಲ್ಲಿ ಈ ವ್ಯಕ್ತಿಯೊಂದಿಗೆ ತಳುಕು ಹಾಕಿಕೊಂಡಿರುವ ಬೆತ್ತಲೆ ಫೋಟೋ, ವಿಡಿಯೋವನ್ನ ವಾಟ್ಸ್​ಆ್ಯಪ್​ ಮೂಲಕ ಕಳುಹಿಸಿದ್ದಾಳೆ. ಅಯ್ಯೋ ಇದೆಂಥ ಅಸಹ್ಯ, ನಾನೆಲ್ಲಿ ಆಕೆಯೊಂದಿಗೆ ಹೋಗಿದ್ದೆ, ಏನಾಯ್ತು ಎಂದು ಆತಂಕಗೊಳ್ಳುವಷ್ಟರಲ್ಲೇ ಅತ್ತಿಂದ 'ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಮಾನ ಕಳೆಯುತ್ತೇನೆ' ಎಂದು ಬೆದರಿಕೆಯ ಸಂದೇಶ ಬಂದಿದೆ. ಇದನ್ನೂ ಓದಿರಿ ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ಇದ್ಯಾವುದಕ್ಕೂ ಜಗ್ಗದ ಆ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿ ರಾಮನಗರ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೌದು, ಸುಂದರ ಹುಡುಗಿಯನ್ನು ಮುಂದಿಟ್ಟುಕೊಂಡು, ಆಕೆಯೊಂದಿಗೆ ಬೆತ್ತಲೆ ವಿಡಿಯೋ ಮೂಲಕ ಯಾಮಾರಿಸಿ ಹಣ ಕೀಳುವ ಗ್ಯಾಂಗ್ ಕಾರ್ಯಾಚರಣೆಗೆ ಇಳಿದಿದೆ. ಮೈಮರೆತರೆ ಖಂಡಿತವಾಗಿ ಮರ್ಯಾದೆಯೊಂದಿಗೆ ಹಣ ಕಳೆದುಕೊಳ್ಳಬೇಕಾದೀತು ಜಾಗ್ರತೆ.

ಫೇಸ್​‌ಬುಕ್, ಇನ್‌ಸ್ಟಾಗ್ರಾಂ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಖಾತೆಯನ್ನು ತೆರೆಯಬೇಕಾದರೆ ನಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿಯನ್ನು ಸಲ್ಲಿಸುವುದು ಅನಿವಾರ್ಯ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳನ್ನು ಹೈಡ್ ಮಾಡದಿದ್ದರೆ ನಮ್ಮ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಗಳು ಖದೀಮರಿಗೆ ಸುಲಭವಾಗಿ ದೊರೆಯುತ್ತವೆ. ಇದನ್ನೇ ಬಳಕೆ ಮಾಡಿಕೊಂಡು ನಮ್ಮ ಗೌರವಕ್ಕೆ ಧಕ್ಕೆ ತಂದು ಹಣ ಕಬಳಿಸಲು ದಂಧೆಕೋರರು ಮುಂದಾಗಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.

ನಿಮ್ಮ ಮೊಬೈಲ್ ಸಂಖ್ಯೆಗೆ ಅಪರಿಚಿತ ನಂಬರ್‌ನಿಂದ ಕರೆ ಬಂದರೆ ಈ ಬಗ್ಗೆ ಎಚ್ಚರವಹಿಸುವುದು ಅಗತ್ಯ. ಯಾರೋ ಸುಂದರವಾಗಿ ಕಾಣುತ್ತಾರೆ, ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಮರುಳಾಗಿ ಬ್ಯಾಂಕ್ ಖಾತೆ ಸೇರಿ ಇತರ ಮಾಹಿತಿ ಹಂಚಿಕೊಂಡರೆ ಹಣ ಮಾಯವಾಗುವುದು ಖಂಡಿತ. ಇಲ್ಲವೇ ಅಶ್ಲೀಲ ವಿಡಿಯೋ ಮುಖಾಂತರ ಸೆಳೆಯಲು ಮುಂದಾದರೂ ಈ ಬಗ್ಗೆಯೂ ಎಚ್ಚರಿಕೆಯಿಂದ ವರ್ತಿಸಬೇಕು. ಇಲ್ಲವಾದರೆ ಎಡಿಟ್ ಮಾಡಿದ ವಿಡಿಯೋಗಳನ್ನು ಹರಿಬಿಟ್ಟು ನಿಮ್ಮಿಂದ ಹಣ ಪೀಕುವ ಕೆಲಸ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಅಂಜಿಕೆ ಇಲ್ಲದೆ ನೇರವಾಗಿ ಹತ್ತಿರದ ಸೈಬರ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿ.