ನ್ಯೂಸ್

5 ನಾಯಿ ಮರಿಗಳನ್ನು ನೆಲಕ್ಕೆ ಬಡಿದು, ಕೈಯಿಂದ ಗುದ್ದಿ ಕೊಂದ ಪಾಪಿ!; ಈ ಶಾಕಿಂಗ್​ ಘಟನೆ ನಡೆದಿದ್ದು ಎಲ್ಲಿ ಗೊತ್ತೆ! | Killed

Killed : ಹೈದರಾಬಾದ್​ನ ವಸತಿ ಅಪಾರ್ಟಮೆಂಟ್​ನ ನೆಲಮಹಡಿಯೊಂದರಲ್ಲಿ ವ್ಯಕ್ತಿಯೊರ್ವ 5 ನಾಯಿ ಮರಿಗಳನ್ನು ನೆಲಕ್ಕೆ ಹೊಡೆದು ಕಲ್ಲಿನಿಂದ ಜಜ್ಜಿ ಮತ್ತು ಕೈಯಿಂದ ಗುದ್ದಿ ಕೊಂದಿರುವ ಅಚ್ಚರಿ ಘಟನೆ ಗುರುವಾರ ನಡೆದಿದೆ.

ವಿಪರ್ಯಾಸ ಎಂದರೆ, ನಾಯಿಮರಿಗಗಳನ್ನು ಕೊಂದಿರುವುದು ಉದ್ಯಮಿಯಾಗಿದ್ದು, ಸಾಕುಪ್ರಾಣಿ ಪ್ರಿಯಕರನಾಗಿದ್ದಾನೆ. ಆರೋಪಿ ಆಶಿಶ್​ ಎಂದು ಗುರುತಿಸಲಾಗಿದ್ದು, ಇತನ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಇತ ನಾಯಿ ಕೊಂದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ, ಪ್ರಕರಣ ಬೆಳಕಿಗೆ ಬಂದಿದೆ.

ಅಪಾರ್ಟ್​ಮೆಂಟ್​ ಪ್ರದೇಶದಲ್ಲಿ ನಡೆದುಕೊಂಡು ಆರೋಪಿ ಆತಿಶ್ ತನ್ನ ನಾಯಿ ಜತೆ ಓಡಾಡುತ್ತಿರುವ ದೃಶ್ಯಗಳು ಅಸ್ಪಸ್ಟವಾಗಿ ಕಾಣುತ್ತಿದೆ. ಏಕಾಏಕಿ ನಾಯಿಮರಿಗಳ ಹತ್ತಿರ ಹೋದ ಆರೋಪಿ ನಾಯಿಮರಿಳನ್ನು ಒಂದದಾಗಿ ನೆಲಕ್ಕೆ ಹೊಡೆದು, ಕಲ್ಲಿನಿಂದ ಜಜ್ಜಿದ್ದಾನೆ. ಅಲ್ಲದೆ, ಸತ್ತಿಯೋ ಇಲ್ಲವೆ ಎಂದು ಪರಿಶೀಲಿಸಿದ ಬಳಿಕ ಕೈಯಿಂದ ಗುದ್ದಿ ಸಾಯಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಕುರಿತು ಕೂಡಲೇ ಎಚ್ಚೆತ್ತ ಅಪಾರ್ಟ್​ಮೆಂಟ್​ನ ನಿವಾಸಿಗಳು ಆಶಿಶ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆದರೆ, ನಾಯಿಮರಿಗಳನ್ನು ಕೊಂದಿದ್ದಾರೂ ಏಕೆ? ಎಂದು ಆರೋಪಿ ತಿಳಿಸಿಲ್ಲವಾದರೂ, ಕ್ರೂರವಾದ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​) ​