ನ್ಯೂಸ್

ಮಗಳ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸ್ಮಶಾನ ಮೌನ, ನಿಶ್ಚಿತಾರ್ಥದ ಮುನ್ನಾ ದಿನವೇ ದುರಂತ

arunakunigal

ಕಲಬುರಗಿ: ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ಈ ಮನೆಯಲ್ಲಿ ನಾಳೆ(ಸೋಮವಾರ) ಮಗಳ ಮದುವೆ ಸಂಭ್ರಮ ಕಳೆಗಟ್ಟಬೇಕಿತ್ತು. ಆದರಿಂದ ಎಲ್ಲವೂ ಮಣ್ಣುಪಾಲಾಗಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ನಿವಾಸಿ ಸೋಮನಾಥ್ ನಂದಗೋಳ ಅವರ ಮನೆಯಲ್ಲಿ ಎಲ್ಲರೂ ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಭರದ ಸಿದ್ಧತೆಯಲ್ಲಿ ತೊಡಗಿದ್ದರು. ದುರಂತವೆಂದರೆ ನಿಶ್ಚಿತಾರ್ಥದ ಮುನ್ನಾ ದಿನವೇ ಯುವತಿಯ ತಂದೆ ಸೋಮನಾಥ್ ನಂದಗೋಳ(55) ಕರೊನಾಗೆ ಬಲಿಯಾಗಿದ್ದಾರೆ.

ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಇಂದು ಅಫಜಲಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಅಲ್ಲಿಯೇ ಕೊನೆಯುಸಿರೆಳೆದಿದ್ದರು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.