ನ್ಯೂಸ್

ಚಾಮರಾಜನಗರ ದೀನಬಂಧು ಶಾಲೆಯ 29 ಮಕ್ಕಳಿಗೆ ಕರೊನಾ ಪಾಸಿಟಿವ್​

ಚಾಮರಾಜನಗರ: ನಗರದ ದೀನಬಂಧು ಆಶ್ರಮ ಶಾಲೆಯ 29 ಮಕ್ಕಳು ಹಾಗೂ ನಾಲ್ವರು ಸಿಬ್ಬಂದಿ ಸೇರಿ 33 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಶಾಲೆಯ ವಸತಿ ಸಮುಚ್ಛಯವನ್ನು ಕಂಟೋನ್ಮೆಂಟ್ ವಲಯ ಮಾಡಲಾಗಿದ್ದು, ಸೋಂಕಿತರೆಲ್ಲರನ್ನೂ ಹೋಂ ಐಸೋಲೇಷನ್​ನಲ್ಲಿ ಇಡಲಾಗಿದೆ.

ಭಾನುವಾರ(ಮೇ 23) ಆರು ವಿದ್ಯಾರ್ಥಿಗಳು ಸೇರಿ 10 ಮಂದಿಗೆ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಶ್ರಮ ಶಾಲೆಯ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಸೋಮವಾರ 23 ಮಂದಿಗೆ ಕರೊನಾ ದೃಢಪಟ್ಟಿದ್ದು ಮಕ್ಕಳ ಸಂಖ್ಯೆಯೇ ಅಧಿಕವಿದೆ ಎಂದು ತಿಳಿದುಬಂದಿದೆ.

ಸದ್ಯ ಸೋಂಕಿತರೆಲ್ಲರೂ ಆರೋಗ್ಯವಾಗಿದ್ದು, ಹೋಂ ಐಸೋಲೇಷನ್​ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.