ನ್ಯೂಸ್

ಹಾಸನದಲ್ಲಿ ಕರೊನಾ ಸೋಂಕಿಗೆ ಆರ್​ಐ ಬಲಿ

arunakunigal

ಹಾಸನ: ಮಹಾಮಾರಿ ಕರೊನಾ ಮರಣ ಮೃದಂಗ ಬಾರಿಸುತ್ತಿದ್ದು, ಲೆಕ್ಕವಿಲ್ಲದಷ್ಟು ಮಂದಿ ಜೀವ ಕಳದುಕೊಂಡಿದ್ದಾರೆ. ಕೋಟ್ಯಂತರ ಕುಟುಂಬ ಸಂಕಷ್ಟಕ್ಕೀಡಾಗಿವೆ. ಆದರೂ ಕ್ರೂರಿ ಕರೊನಾ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಇದೀಗ ಈ ಮಹಾಮಾರಿಗೆ ರೆವಿನ್ಯೂ ಇನ್​ಸ್ಪೆಕ್ಟರ್ ಬಲಿಯಾಗಿದ್ದಾರೆ.

ಕಟ್ಟಾಯ ಗ್ರಾಮದ ಆರ್​ಐ ಮೋಹನ್ ಕುಮಾರ್(46) ಮೃತರು. ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಮೋಹನ್​, 2 ತಿಂಗಳ ಹಿಂದಷ್ಟೇ ಕಟ್ಟಾಯ ಗ್ರಾಮಕ್ಕೆ ವರ್ಗಾವಣೆಯಾಗಿದ್ದರು. ಇತ್ತೀಚಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಮೃತಪಟ್ಟರು.