ಕಲಬುರಗಿ: ಮಹಾಮಾರಿ ಕರೊನಾಗೆ ಪುರಸಭೆ ಸದಸ್ಯ ಮತ್ತು ಇವರ ತಾಯಿ, ಸಹೋದರ ಸೇರಿ ಒಂದೇ ಕುಟುಂಬದ ಮೂವರು ಬಲಿಯಾಗಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಕರುಣಾಜನಕ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ.
ಆರ್ಸಿ ತಾಂಡದ ನಿವಾಸಿ ಚಾಂದಿಬಾಯಿ ನಾಯಕ್ (74), ಇವರ ಪುತ್ರ ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್(46) ಮತ್ತು ಕಿರಿಯ ಪುತ್ರ ಭಜನ್ ನಾಯಕ್(32) ಮೃತರು. ಪ್ರಕಾಶ್ ನಾಯಕ್ ಕಳೆದ ವಾರ ಕರೊನಾಗೆ ಬಲಿಯಾಗಿದ್ದರು. ಇವರ ಕಿರಿಯ ಸಹೋದರ ಭಜನ್ ಮತ್ತು ತಾಯಿ ಚಾಂದಿಬಾಯಿ ಅವರಿಗೂ ಕರೊನಾ ಸೋಂಕು ತಗುಲಿದ್ದರಿಂದ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತಾಯಿ-ಮಗ ಇಬ್ಬರೂ ನಿನ್ನೆ ಕೊನೆಯುಸಿರೆಳೆದಿದ್ದಾರೆ.
ಚಾಂದಿಬಾಯಿ ಅವರ ಮತ್ತೊಬ್ಬ ಮಹೇಶ್ ನಾಯಕ್ಗೂ ಕರೊನಾ ಸೋಂಕು ತಗುಲಿದ್ದು, ಪರಿಸ್ಥಿತಿ ಗಂಭೀರಾವಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಒಂದೇ ಕುಟುಂಬದಲ್ಲಿ ಮೂವರ ಸಾವಿನಂದ ಕುಟುಂಬಸ್ಥರು ಕಂಗೆಟ್ಟಿದ್ದಾರೆ.