OTT: ನಟಿ ಅನುಪಮಾ ಪರಮೇಶ್ವರನ್ ನಟಿಸಿರುವ ಬಹುನಿರೀಕ್ಷಿತ ‘ಜಾನಕಿ ವಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಸಿನಿಮಾ ರಿಲೀಸ್ಗೂ ಮುನ್ನ ಭಾರೀ ವಿವಾದದಿಂದಲೇ ಕೂಡಿತ್ತು. ಈ ಚಿತ್ರ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಬಿಡುಗಡೆ ಅನುಮತಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸಂಪೂರ್ಣವಾಗಿ ನಿರಾಕರಿಸಿತ್ತು. ಅದಕ್ಕೆ ಕಾರಣ, 'ಜಾನಕಿ' ಹೆಸರು. ಇದೊಂದರಿಂದಲೇ ಸಿನಿಮಾ ಭಾರೀ ವಿವಾದದಿಂದ ಪರದಾಡಿತು.
ಇದನ್ನೂ ಓದಿ: ಟ್ರಂಪ್ ಸುಂಕ ಎಫೆಕ್ಟ್! ಮತ್ತೇ ಬಾನಿಗೇರಿದ ಗೋಲ್ಡ್; ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Rates
ಈ ಹೆಸರನ್ನು ವಿರೋಧಿಸಿದ್ದ ಸಿಬಿಎಫ್ಸಿ, ಟೈಟಲ್ ಬದಲಾವಣೆ ಜೊತೆಗೆ 96 ಕಟ್ಗಳಿಗೆ ಒತ್ತಾಯಿಸಿತ್ತು. ಸಿಬಿಎಫ್ಸಿ ಮತ್ತು ಚಿತ್ರತಂಡದ ಕಾನೂನು ಸಮರ ಕಡೆಗೂ ಕೋರ್ಟ್ ಅಂಗಳದಲ್ಲಿ ಅಂತ್ಯಗೊಂಡಿತು. ಬಳಿಕ ಚಿತ್ರ ಕಳೆದ ತಿಂಗಳ ಜು.17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಪ್ರೇಕ್ಷಕರ ಎದುರು ಕಮಾಲ್ ಮಾಡುವಲ್ಲಿ ಸೋತ ಸಿನಿಮಾ, ಈಗ ಒಟಿಟಿಯಲ್ಲಿ ಹೆಚ್ಚು ವೀಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದೆ. ಇದೇ ಕಾರಣದಿಂದ ಚಿತ್ರವನ್ನು ಶೀಘ್ರವೇ ಒಟಿಟಿ ಪಾಲು ಮಾಡಿದೆ ಚಿತ್ರತಂಡ.
ಹಲವಾರು ವಿಳಂಬ, ಆಕ್ಷೇಪಣೆ ಜತೆಗೆ ಚಿತ್ರಮಂದಿರದಲ್ಲಿ ಸೋಲು ಕಂಡ ಸಿನಿಮಾ, ಇದೇ ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15) ಪ್ಯಾನ್ ಇಂಡಿಯಾ ರಿಲೀಸ್ ಆಗಲು ಸಜ್ಜಾಗಿದೆ. ಮೂಲತಃ ಮಲಯಾಳಂ ಭಾಷೆಯಲ್ಲಿ ತೆರೆಕಂಡ JSK, ಜೀ5 ಒಟಿಟಿಯಲ್ಲಿ ಮಲಯಾಳಂ, ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.
ಇದನ್ನೂ ಓದಿ: ಆತ ನಿಜಕ್ಕೂ ಅದ್ಭುತ… ಅಂಥಾ ಆಟಗಾರನಿದ್ದರೆ ನಾಯಕತ್ವ ತುಂಬಾ ಸುಲಭ ಎಂದ ಶುಭಮಾನ್ ಗಿಲ್! Shubman Gill
ಜೆ. ಫಣೀಂದ್ರ ಕುಮಾರ್ ನಿರ್ದೇಶಿಸಿದ ಮತ್ತು ಕಾಸ್ಮೊಸ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್, ಸುರೇಶ್ ಗೋಪಿ, ಶ್ರುತಿ ರಾಮಚಂದ್ರನ್, ದಿವ್ಯಾ ಪಿಳ್ಳೈ ಮತ್ತು ಮಾಧವ್ ಸುರೇಶ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಗಿಬ್ರಾನ್ ಮತ್ತು ಗಿರೀಶ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).