ಮೈಸೂರು: ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆ ಮೈಸೂರು ಜಿಲ್ಲೆಗೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾನುವಾರ ಬೆಳಗ್ಗೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದರು. ಬಳಿಕ ಬದನವಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬಣ್ಣ ಬಳಿದರು.
ಭಾರತ್ ಜೋಡೋ ಯಾತ್ರೆಯು ಶುಕ್ರವಾರ ಗುಂಡ್ಲುಪೇಟೆಗೆ ಆಗಮಿಸುವ ಮೂಲಕ ಕರ್ನಾಟಕ ಪ್ರವೇಶಿಸಿದೆ. ಅಭೂತಪೂರ್ವ ಬೆಂಬಲದೊಂದಿಗೆ ಯಾತ್ರೆಯು ಮೈಸೂರು ಜಿಲ್ಲೆ ಪ್ರವೇಶಿಸಿದ್ದು, ಗಾಂಧಿ ಜಯಂತಿ ಹಿನ್ನೆಲೆ ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಹುಲ್, ಅಲ್ಲಿಯೇ ಗಾಂಧಿ ಜಯಂತಿ ಆಚರಿಸಿದರು. ಭಜನೆ, 200 ಗಿಡ ನಡೆಯುವ ಕಾರ್ಯಕ್ರಮ ನಡೆಯಿತು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ನೇಯ್ಗೆಕಾರರೊಂದಿಗೆ ರಾಹುಲ್ ಸಂವಾದ ನಡೆಸಿದರು. ಈ ಕೇಂದ್ರಕ್ಕೆ 1927ರಲ್ಲಿ ಗಾಂಧೀಜಿ ಚಾಲನೆ ನೀಡಿದ್ದರು.
ನಂತರ ಬದನವಾಳು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮವೂ ನಡೆಯಿತು. ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್ಗೆ ರಾಹುಲ್ ನೇತೃತ್ವದ ಟೀಂ ಬಣ್ಣ ಬಳಿಯುತು. ಸ್ವತಃ ರಾಹುಲ್ ಅವರೂ ಬಣ್ಣ ಬಳಿದರು. ರಾಹುಲ್‌ಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸಾಥ್ ನೀಡಿದರು.
ಮಧ್ಯಾಹ್ಮ 3.30 ಇತಿಹಾಸ ಪ್ರಸಿದ್ಧ ನಂಜನಗೂಡಿನ ನಂಜುಡೇಶ್ವರ ಸನ್ನಧಿಗೆ ರಾಹುಲ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವರು. ಸಂಜೆ ತಾಂಡವಪುರದಿಂದ ಮೈಸೂರಿನತ್ತ ಪಾದಯಾತ್ರೆ ನಡೆಯಲಿದೆ. ರಾತ್ರಿ ಎಕ್ಸಿಬಿಷನ್ ಗ್ರೌಂಡ್ ಪಕ್ಕದ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.