Dead woman lying on the floor under white cloth with focus on hand 
ನ್ಯೂಸ್

10 ನೇ ತರಗತಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಂದ 9 ನೇ ತರಗತಿ ವಿದ್ಯಾರ್ಥಿ ! | Students

Students: 10 ನೇ ತರಗತಿಯ ವಿದ್ಯಾರ್ಥಿಯನ್ನು ಅದೇ ಶಾಲೆಯಲ್ಲಿ ಓದುತ್ತಿದ್ದ 9 ನೇ ತರಗತಿ ವಿದ್ಯಾರ್ಥಿ ಕೊಲೆ ಮಾಡಿರುವ ಘಟನೆ ಗಾಜಿಪುರದ ಮಹಾರಾಜ್‌ಗಂಜ್‌ನಲ್ಲಿರುವ ಸನ್‌ಬೀಮ್ ಶಾಲೆಯಲ್ಲಿ ಸೋಮವಾರ (ಆ.18) ರಂದು ನಡೆದಿದೆ.

ಪೊಲೀಸರ ಪ್ರಕಾರ, ಆದಿತ್ಯ ಹಾಗೂ ಇತರ ಸಹಪಾಠಿಗಳ ನಡುವೆ ಮೂರನೇ ಅವಧಿಯಲ್ಲಿ ಗಲಾಟೆ ಶುರುವಾಗಿದ್ದು, ಈ ಗಲಾಟೆಯಲ್ಲಿ 9 ನೇ ತರಗತಿ ವಿದ್ಯಾರ್ಥಿ ತನ್ನ ಬಾಟಲ್​ನಲ್ಲಿ ಮುಚ್ಚಿಟ್ಟಿದ್ದ ಚಾಕುವಿನಿಂದ ಆದಿತ್ಯ ವರ್ಮಾನ ಎದೆಯ ಮೇಲೆ ಅನೇಕ ಬಾರಿ ಇರಿದ ಪರಿಣಾಮ ತೀವ್ರ ರಕ್ತದೊತ್ತಡದಿಂದ ಮೃತಪಟ್ಟಿದ್ದಾನೆ.

ಘಟನೆ ನಡೆದ ನಂತರ ಶಿಕ್ಷಕರು ಆದಿತ್ಯನನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದು, ಮಾರ್ಗಮಧ್ಯೆದಲ್ಲೇ ಆದಿತ್ಯ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಈ ಗಲಾಟೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಹ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಯಿಂದ ಶಾಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದಾರೆ. ಇನ್ನು ಆದಿತ್ಯನ ತಂದೆ ಶಿವ್ಜಿ ವರ್ಮಾ ಆರೋಪಿಗಳಾದ 9 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಮೇಲೆ ದೂರು ದಾಖಲಿಸಿದ್ದಾರೆ.

ಈ ವಿಚಾರದ ಬಗ್ಗೆ ಹಿರಿಯ ಅಧಿಕಾರಿಗಳು ಶಾಲೆಯ ಆಡಳಿತ ಮಂಡಳಿಯನ್ನು ವಿಚಾರಿಸಿದಾಗ ಈ ದಾಳಿಯು ಒಬ್ಬ ಹುಡಿಗಿಯೊಂದಿಗಿನ ವಿವಾದಕ್ಕೆ ಸಂಬಂಧಿಸಿರಬಹುದು ಎಂದು ಸೂಚಿಸಲಾಗಿದೆ. ಆದರೆ ಇದನ್ನು ಪೊಲೀಸರು ಇನ್ನು ದೃಢಿಕರಿಸಿಲ್ಲ. ಜಗಳದ ಹಿಂದಿನ ನಿಖರವದ ಕಾರಣ ಇನ್ನು ಸ್ಪಷ್ಟವಾಗಿಲ್ಲ. ಬ್ಯಾಗ್ ತಪಾಸಣೆಯನ್ನು ತಪ್ಪಿಸಲು ಆರೋಪಿಯು ತನ್ನ ನೀರಿನ ಥರ್ಮೋಸ್ ಒಳಗೆ ಸಣ್ಣ ಚಾಕುವನ್ನು ಮರೆಮಾಡಿದ್ದನು ಎಂದು ನಗರದ ಕೊತ್ವಾಲ್ ದೀನ್ ದಯಾಳ್ ಪಾಂಡೆ ತಿಳಿಸಿದ್ದಾರೆ.

ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಆದಿತ್ಯ ವರ್ಮಾನ ಕುಟುಂಬ ಆರೋಪಿಸಿದ್ದು, ಕಠಿಣ ತಪಾಸಣೆ ನಡೆಸಿದ್ದರೆ ಈ ದುರಂತವನ್ನು ತಡೆಯಬಹುದಿತ್ತು ಎಂದು ಹೇಳಿದ್ದಾರೆ. ಇನ್ನು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)