ನ್ಯೂಸ್

ಕೋಳಿಗೆ ಆಹಾರ ತಯಾರಿಸುವ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

arunakunigal

ಶಿವಮೊಗ್ಗ: ಕೋಳಿಗೆ ಆಹಾರ ತಯಾರಿಸುವ ಯಂತ್ರಕ್ಕೆ ಸಿಲುಕಿ ಕಾರ್ಮಿಕ‌ ಮೃತಪಟ್ಟ ಘಟನೆ ಭದ್ರಾವತಿಯ ಲೋಯರ್ ಹುತ್ತಾ ಸಮೀಪದ ಆರ್​​ಎಸ್ ಪ್ಯಾರಾ ಸಿಟಿಕಲ್ ಫ್ಯಾಕ್ಟರಿಯಲ್ಲಿ ಶನಿವಾರ ಸಂಭವಿಸಿದೆ.

ಭದ್ರಾವತಿಯ ಭೂತನಗುಡಿಯ ನಿವಾಸಿ ಸೆಂದಿಲ್ ಕುಮಾರ್(35) ಮೃತ ಕಾರ್ಮಿಕ. ಈತ ಕೋಳಿ ಫೀಡ್ ಫ್ಯಾಕ್ಟರಿಯಲ್ಲಿ ಸೂಪರ್​ವೈಸರ್​ ಆಗಿ ಕೆಲಸ ಮಾಡುತ್ತಿದ್ದ. ಫೀಡ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.