ನ್ಯೂಸ್

ಕಲಾಪಕ್ಕೆ ಹಾಜರಾಗಲು ಬಂದಿದ್ದ ನಗರಸಭೆ ಸದಸ್ಯನಿಗೆ ಹೃದಯಾಘಾತ: ಕೋರ್ಟ್​ ಆವರಣದಲ್ಲೇ ಸಾವು

ಚಾಮರಾಜನಗರ: ಪ್ರಕರಣವೊಂದರ ಸಂಬಂಧ ನ್ಯಾಯಾಲಯ ಕಲಾಪಕ್ಕೆ ಹಾಜರಾಗಲು ಬಂದಿದ್ದ ನಗರಸಭೆ ಸದಸ್ಯರೊಬ್ಬರಿಗೆ ಕೋರ್ಟ್​ ಆವರಣದಲ್ಲೇ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬುಧವಾರ ಸಂಭವಿಸಿದೆ.

ನಗರಸಭೆಯ 6ನೇ ವಾರ್ಡಿನ ಸದಸ್ಯ ಸಮೀವುಲ್ಲಾ ಖಾನ್ (45) ಮೃತರು‌. ಎಸ್​ಡಿಪಿಐ ಪಕ್ಷದ ಕಾರ್ಯಕರ್ತರು 3 ವರ್ಷದ ಹಿಂದೆ ಬಾಬರಿ ಮಸೀದಿ ಧ್ವಂಸ ದಿನದ ನೆನಪಿನಾರ್ಥ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದರು. ಈ ಸಬಂಧ ನಗರಸಭೆ ಸದಸ್ಯ ಸಮೀವುಲ್ಲಾ ಸೇರಿದಂತೆ 104 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ಕಲಾಪ ಬುಧವಾರ ಇದ್ದ ಕಾರಣ ಕೋರ್ಟ್​ಗೆ ಸಮೀವುಲ್ಲಾ ಹಾಜರಾಗಿದ್ದರು.

ಇದೇ ವೇಳೆ ಮೆಟ್ಟಿಲ ಬಳಿ ಸುಸ್ತಾಗಿ ಕುಳಿತು ಸ್ಥಳಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆ ಸಾಗಿಲಾಯಿತ್ತಾದರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.