ನ್ಯೂಸ್

ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ 37 ಜನರಿಂದ ಅತ್ಯಾಚಾರ: ಅಮ್ಮನ ಕುಮ್ಮಕ್ಕಿನಿಂದಲೇ ಕೃತ್ಯ, ಮುಂದೇನಾಯ್ತು?

ಚಿಕ್ಕಮಗಳೂರು: ಎರಡು ತಿಂಗಳ ಹಿಂದೆ ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಬಾಲಕಿಯ ಹೆತ್ತಮ್ಮನ ಕುಮ್ಮಕ್ಕಿನಿಂದಲೇ 37 ಜನರಿಂದ ಅತ್ಯಾಚಾರ ನಡೆದಿತ್ತು ಎಂಬ ಸ್ಫೋಟಕ ಸತ್ಯ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿತ್ತು.

ಸತತ 5 ತಿಂಗಳ ಕಾಲ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ 37 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್​ ವೃತ್ತ ನಿರೀಕ್ಷಕ ಬಿ.ಎಂ. ಸಿದ್ದರಾಮಯ್ಯ ಅವರನ್ನ ಅಮಾನತು ಮಾಡಲಾಗಿತ್ತು. ಆ ಬಳಿಕ ಎಎಸ್ಪಿ ಶೃತಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿದ್ದು, ಅಂತಿಮ ಹಂತಕ್ಕೆ ಬಂದಿದೆ. ಚಿಕ್ಕಮಗಳೂರಿನ ವಿಶೇಷ ಪೋಕ್ಸೋ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದನ್ನೂ ಓದಿರಿ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

ಗೋಚವಳ್ಳಿ ಗ್ರಾಮದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಕೃತ್ಯ ತಡವಾಗಿ ಬೆಳಕಿಗೆ ಬಂದಿತ್ತು. ಸಂತ್ರಸ್ತ ಬಾಲಕಿ ಹೇಳಿಕೆ ಆಧಾರಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೃಂಗೇರಿ ಸಿಡಿಪಿಒ ಎನ್.ಜಿ.ರಾಘವೇಂದ್ರ ಅವರ ಮೂಲಕ 2021ರ ಜ.30 ರಂದು ದೂರು ನೀಡಿದ್ದರು.

ಕಿಕ್ರೆ ಸ್ಮಾಲ್​ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್​ ಆನೆಗುಂದ, ಹೊಳೆಕೊಪ್ಪದ ವಿಕಾಶ್​, ಮಣಿಕಂಠ, ಸಂಪತ್​ ನೆಮ್ಮಾರ್, ಶೃಂಗೇರಿಯ ಅಶ್ವತ್​ ಗೌಡ, ಆನೆಗುಂದದ ರಾಜೇಶ್​, ಅಮಿತ್​, ಕುರುಬಗೆರೆಯ ಸಂತೋಷ, ಹೆಗ್ಗದ್ದೆಯ ದೀಕ್ಷಿತ್​, ಹೆರೂರಿನ ಸಂತೋಷ್​, ನಿರಂಜನ್​ ಕಿಗ್ಗ, ಶೃಂಗೇರಿಯ ನಯನಗೌಡ, ಅಭಿಗೌಡ, ಖಾಂಡ್ಯದ ಯೋಗೀಶ್​ ಸೇರಿ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಈ ದುಷ್ಕೃತ್ಯಕ್ಕೆ ಸಂತ್ರಸ್ತ ಬಾಲಕಿಯ ಚಿಕ್ಕಮ್ಮ ಗೀತಾಳ ಸಹಕಾರವೂ ಇದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಗೋಚವಳ್ಳಿ ಎಂ.ಜಿ.ಆರ್ ಕ್ರಷರ್ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿತ್ತು. 2020ರ ಸೆಪ್ಟೆಂಬರ್​ 1ರಿಂದ 2021ರ ಜನವರಿ 27ರವರೆಗೆ ಬಾಲಕಿ ಮೇಲೆ ಕಾಮುಕರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಲೈಂಗಿಕ ದೌರ್ಜನ್ಯವೆಸಗಿದ 15ಕ್ಕೂ ಅಧಿಕ ಜನರ ಗುರುತು ಸಂತ್ರಸ್ತೆಗಿಲ್ಲ ಇಲ್ಲ. ಅವರನ್ನೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದರು.

ಕೇಸ್​ ದಾಖಲಾಗುತ್ತಿದ್ದಂತೆ ಕಾಮುಕರಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲೂ ದಟ್ಟವಾಗಿ ಕೇಳಿಬಂತು. ಸದನಲ್ಲೂ ಪ್ರತಿಧ್ವಿನಿಸಿದ ಈ ಪ್ರಕರಣ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ವಿಪಕ್ಷದ ಸದಸ್ಯರು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದರು. ಶೃಂಗೇರಿ ಪೊಲೀಸ್​ ಠಾಣೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಆರಂಭದಲ್ಲಿ ಸಂತ್ರಸ್ತ ಬಾಲಕಿಯ ಚಿಕ್ಕಮ್ಮಳೇ ಪ್ರಮುಖ ಆರೋಪಿ ಎನ್ನಲಾಗಿತ್ತು. ಆದರೆ, ತನಿಖೆ ಚುರುಕುಗೊಳ್ಳುತ್ತಿದ್ದಂತೆ ಆಕೆ ಸಂತ್ರಸ್ತೆಯ ಚಿಕ್ಕಮ್ಮ ಅಲ್ಲ, ಬದಲಾಗಿ ಆಕೆಯೇ ಹೆತ್ತ ತಾಯಿ ಎಂಬುದು ಬಹಿರಂಗವಾಗಿತ್ತು.