ನ್ಯೂಸ್

ರಸ್ತೆಯಲ್ಲಿ ಆಟವಾಡುತ್ತಿರುವ ಬಾಲಕನ ಮೇಲೆ ಹರಿದ ಕಾರು! ಎಲ್ಲೆಡೆ ವಿಡಿಯೋ ವೈರಲ್​..| Mumbai

Mumbai: ಮುಂಬೈನ ಕಂಜುರ್‌ಮಾರ್ಗ್‌ನ ಎಂಎಂಆರ್‌ಡಿಎ ಕಾಲೋನಿಯ ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಕಾರೊಂದು ಬಾಲಕನ ಮೇಲೆ ಹರಿದ ಪರಿಣಾಮ ಬಾಲಕನಿಗೆ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಸೋಮವಾರ ಸಂಜೆ ಸುಮಾರು 4:45 ಕ್ಕೆ ನಡೆದಿದ್ದು, ದೃಶ್ಯ ಅಲ್ಲಿಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಗಾಯಾಳು ಸಿಯಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಸಿಟಿವಿ ದೃಶ್ಯದಲ್ಲೇನಿದೆ?

ಈ ವಿಡಿಯೋದಲ್ಲಿ ಇಬ್ಬರು ಬಾಲಕರು ಮೊದಲು ಆಟವಾಡುತ್ತಿರುತ್ತಾರೆ. ಆಗ ಒಂದು ಬೂದು ಬಣ್ಣದ ಕಾರು ಕಿರಿದಾದ ರಸ್ತೆಯಲ್ಲಿ ಕ್ರಮೇಣ ತಿರುಗುತ್ತದೆ. ಇಬ್ಬರಲ್ಲಿ ಒಂದು ಬಾಲಕ ರಸ್ತೆ ಬಳಿ ಆಟವಾಡುತ್ತಾ ಹೋಗುತ್ತಾನೆ. ಆ ಸಂದರ್ಭದಲ್ಲಿ ಕಾರು ಚಾಲಕ ಆ ಮಗುವಿಗೆ ಕಾರಿಂದ ಗುದ್ದಿದ್ದಾನೆ. ಈ ಪರಿಣಾಮ ಬಾಲಕ ಕಾರಿನ ಟೈರ್​ನ ಕೆಳಗೆ ಸಿಲುಕಿಕೊಂಡಿದ್ದು, ಆಗ ಅಲ್ಲಿಯ ಸ್ಥಳೀಯರು ಬಾಲಕನಿಗೆ ಸಹಾಯ ಮಾಡಲು ಓಡಿ ಬಂದಿದ್ದಾರೆ. ಇನ್ನು ಕಾರನ್ನು ಹಿಂದಕ್ಕೆ ತಳ್ಳಿ ಬಾಲಕನನ್ನು ರಕ್ಷಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ಏಜೆನ್ಸೀಸ್​)