ನ್ಯೂಸ್

ಗೋವಾದಲ್ಲಿ ಭೀಕರ ಅಪಘಾತ: ಕಾರವಾರ ಮೂಲದ ಒಂದೇ ಕುಟುಂಬದ ಮೂವರ ಸಾವು, ಐವರ ಸ್ಥಿತಿ ಗಂಭೀರ

ಕಾರವಾರ: ಗೋವಾ ರಾಜ್ಯದ ಕಾಣಕೋಣ ಬಳಿ ಬುಧವಾರ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರವಾರ ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಮೃತರೆಲ್ಲರೂ ಒಂದೇ ಕುಟುಂಬದವರು.

ಮಾಜಾಳಿ‌ ಮೂಲದ ಸದ್ಯ ಗೋವಾದ ವಾಸ್ಕೊದಲ್ಲಿ ನೆಲೆಸಿರುವ ಉಲ್ಲಾಸ ನಾಗೇಕರ್ (64), ಇವರ ಪತ್ನಿ ವೀಣಾ ಉಲ್ಲಾಸ ನಾಗೇಕರ್ (60), ಪುತ್ರ ಹರೀಶ ಉಲ್ಲಾಸ ನಾಗೇಕರ್(35) ಮೃತರು.

ಹರ್ಷಿತಾ ಹರೀಶ ನಾಗೇಕರ್(26), ಇವರ ಪುತ್ರಿ ಸಾನ್ವಿ ಹರೀಶ ನಾಗೇಕರ್(2), ಸಮೀಕ್ಷಾ ನಾಗೇಕರ್ (40), ಸಾಯಿ ನಾಗೇಕರ್ (13), ಸುಕ್ಷತಾ ಕಾಣಕೋಣಕರ್ (31) ಗಂಭೀರವಾಗಿ ಗಾಯಗೊಂಡಿದ್ದು, ದಕ್ಷಿಣ ಗೋವಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತಕ್ಕೀಡಾದ ಕಾರುಗಳು ನುಜ್ಜುಗುಜ್ಜಾಗಿವೆ.