ಆನಂದಸಿಂಗ್. 
ನ್ಯೂಸ್

ನನ್ನ ದಾರಿ ನಾನೇ ನೋಡಿಕೊಳ್ಳುವೆ... ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ ಆನಂದ್​ ಸಿಂಗ್​!

ಬಳ್ಳಾರಿ: ನಾನು ಕೇಳಿರೋದೇ ಒಂದು, ಕೊಟ್ಟಿರೋದೇ ಮತ್ತೊಂದು. ನನಗೆ ಕೊಟ್ಟಿರುವ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಳುವೆ. ನನ್ನಿಷ್ಟದ ಖಾತೆ ಕೊಡದಿದ್ರೆ ನಾನು ಶಾಸಕನಾಗಿ ಉಳಿಯುವೆ ಎಂದು ಸಚಿವ ಆನಂದ್​ ಸಿಂಗ್​ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಅಸಮಾಧಾನಗೊಂಡ ಆನಂದ್​ ಸಿಂಗ್​, ಬಿಜೆಪಿ ಸರ್ಕಾರ ಬರಲು ಮೊದಲು ರಾಜೀನಾಮೆ ಕೊಟ್ಟದ್ದು ನಾನು. ಆ ಬಗ್ಗೆ ಎಲ್ಲರಿಗೂ ಗೊತ್ತಿದೆ. ನನ್ನಂತೆ ಹಲವರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಯಾಗಿದೆ ಎಂದರು.

ಆನಂದ್​ ಸಿಂಗ್​ಗೆ ಪ್ರವಾಸೋದ್ಯಮ ಖಾತೆ ಕೊಡಲಾಗಿದೆ. ಈ ಖಾತೆ ಕೊಟ್ಟಿದ್ದಕ್ಕೆ ಬೇಸರಗೊಂಡಿರುವ ಆನಂದ್​ ಸಿಂಗ್​, ನನಗೆ ನಿರಾಶೆ ಆಗಿದೆ. ನಾನು ಕೇಳಿದ ಖಾತೆ ಕೊಡದಿದ್ದಕ್ಕೆ ಬೇಸರ ಆಗಿದೆ ಎಂದರು. ಮತ್ತೊಮ್ಮೆ ಸಿಎಂಗೆ ಮನವಿ ಮಾಡುವೆ. ಕೊಡದಿದ್ದರೆ ನನ್ನ ದಾರಿಯನ್ನ ನಾನೇ ನೋಡಿಕೊಳ್ಳುವೆ ಎಂದು ಆಕ್ರೋಶ ಹೊರಹಾಕುವ ಮೂಲಕ ರಾಜೀನಾಮೆ ನೀಡೋದೇ ಲೇಸು ಎನ್ನುವ ಹಂತಕ್ಕೆ ಬಂದಿದ್ದಾರೆ.