ನ್ಯೂಸ್

ಕಾಲ್ ​ಗರ್ಲ್​ ಜತೆ ಸೆಕ್ಸ್​​ ಮೂಡ್​ನಲ್ಲಿದ್ದ ಉದ್ಯಮಿ ಪುತ್ರನಿಗೆ ಕಾದಿತ್ತು ಶಾಕ್​! ಕಾಮದಾಟಕ್ಕೆ ಬಂದವಳು ದುರಂತ ಅಂತ್ಯ

ಲಖನೌ(ಉತ್ತರ ಪ್ರದೇಶ): ಪ್ರಸಿದ್ಧ ಉದ್ಯಮಿ ಮಗನೊಬ್ಬನ ಕರೆ ಮೇರೆಗೆ ಥಾಯ್ಲೆಂಡ್​​​​ನಿಂದ ಭಾರತಕ್ಕೆ ಬಂದ ಕಾಲ್​ ಗರ್ಲ್​ ಇಲ್ಲೇ ಮೃತಪಟ್ಟಿದ್ದು, ಅನುಮಾನಕ್ಕೆ ಎಡೆ ಮಾಡಿದೆ.

ಇತ್ತೀಚಿಗೆ ಉದ್ಯಮಿ ಪುತ್ರನೊಬ್ಬ ತುಂಬಾ ಆಸೆಯಿಂದ ಏಜೆಂಟ್ ಮೂಲಕ ಥಾಯ್ಲೆಂಡ್​​​​​​​ನಿಂದ ಕಾಲ್​ ಗರ್ಲ್​ವೊಬ್ಬಳನ್ನ ಬರೋಬ್ಬರಿ 7 ಲಕ್ಷ ರೂಪಾಯಿ ಖರ್ಚು ಮಾಡಿ ಲಖನೌಗೆ ಕರೆಸಿಕೊಂಡಿದ್ದ. ಏ.28ರಂದು ಇದ್ದಕ್ಕಿದ್ದಂತೆ ಆಕೆ ಅನಾರೋಗ್ಯಕ್ಕೀಡಾಗಿದ್ದು, ಲೋಹಿಯಾ ಆಸ್ಪತ್ರೆಗೆ ಉದ್ಯಮಿ ಪುತ್ರ ಕರೆದೊಯ್ದ ಬೆನ್ನಲ್ಲೇ ಆತನಿಗೆ ಶಾಕ್​ ಕಾದಿತ್ತು. ಸೆಕ್ಸ್​ ಮೂಡ್​ನಲ್ಲಿದ್ದವನಿಗೆ ಆಸ್ಪತ್ರೆಯ ವರದಿ ಕೇಳಿ ಆತಂಕ ಶುರುವಾಗಿತ್ತು.

ಆಸ್ಪತ್ರೆಯಲ್ಲಿ ಕಾಲ್​ ಗರ್ಲ್​ಗೆ ಕೋವಿಡ್​ ಪರೀಕ್ಷೆ ಮಾಡಿದ್ದು, ವರದಿ ಪಾಸಿಟಿವ್​ ಬಂದಿದೆ. ಚಿಕಿತ್ಸೆ ನೀಡಲಾಯಿತ್ತಾದರೂ ಆಕೆ ಮೇ 3ರಂದು ಕೊನೆಯುಸಿರೆಳೆದಳು. ಇದಕ್ಕೂ ಮುನ್ನ ಈತ ಥಾಯ್ಲೆಂಡ್​​ ರಾಯಭಾರ ಕಚೇರಿ ಸಂಪರ್ಕಿಸಿ ಕಾಲ್​ಗರ್ಲ್​ಗೆ ಕರೊನಾ ಇರುವ ವಿಚಾರ ತಿಳಿಸಿದ್ದ. ಬಳಿಕ ಭಾರತದ ವಿದೇಶಾಂಗ ಸಚಿವಾಲಯದ ನೆರವಿನಲ್ಲಿ ಯುವತಿಯನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದನ್ನೂ ಓದಿರಿ ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಕೋವಿಡ್​ಗೆ ಬಲಿ! ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ಪುಟ್ಟ ಮಗಳೇ ಗುಂಡಿ ಅಗೆದು ಕಾರ್ಯ ಮುಗಿಸಿದ್ಲು

ಮೃತಳ ಶವವನ್ನ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲು ಥಾಯ್ಲೆಂಡ್​​ ರಾಯಭಾರ ಕಚೇರಿಗೆ ಸಂಪರ್ಕಿಸಿದ್ದನಾದರೂ ಸಫಲವಾಗಲಿಲ್ಲ. ಕೊನೆಗೆ ಲಖನೌದ ಬೈಕುಂತ್​ ಚಿತಾಗಾರದಲ್ಲಿಯೇ ಪೊಲೀಸರು ಅಂತ್ಯಕ್ರಿಯೆ ನೆರವೇರಿಸಿದ್ದರು.

ಇದೀಗ ಕಾಲ್​ಗರ್ಲ್​ ಸಾವಿನ ಪ್ರಕರಣದ ಹಿಂದೆ ಬಿದ್ದ ಪೊಲೀಸರು ತನಿಖೆ ಮುಂದುವರಿಸಿದ್ದು, ಲಖನೌ ರಾಜಧಾನಿಯಲ್ಲಿ ಅಂತಾರಾಷ್ಟ್ರೀಯ ಕಾಲ್ ಗರ್ಲ್ ದಂಧೆ ನಡೆಯುತ್ತಿರುವ ಬಗ್ಗೆ ಶಂಕಿಸಿದ್ದಾರೆ.